ಭಾನುವಾರ, ಫೆಬ್ರವರಿ 24, 2019

790. ಬಂಧು

ಬಂಧು

ಬಂದೆನಿಲ್ಲಿ ಬಂಧುವಾಗಿ
ಭವವ ಕಳೆಯೆ ಭುವಿಯ ಮೇಲೆ..
ಅತಿಥಿಯೆಂದು ಧರೆಯುದ್ಧರಿಸಿ
ಧವಸ ನೀಡಿ  ಸಲಹಿತು..

ಇಳೆಯ ಕಾರ್ಯ ನೋಡಿದಾಗ
ಕಳೆಯು ಬಂತು ಬಾಳಿನಾಗ
ಮೊಳೆಯುತ್ತಿದ್ದ ಬುದ್ಧಿಗಾನು
ಬೆಳೆಯುವಾಸೆ ತೋರಿದೆ...

ಬರಿಯ ಉಂಡು, ತಿಂದು ತೇಗಿ
ವನವ ಸರ್ವ ನಾಶ ಮಾಡಿ
ತನುವ ತುಂಬ ಮೋಸ ತುಂಬಿ
ಬೆಳೆದ ಮನುಜ ಪರರ ನಂಬಿ...

ಮೋಸ ಮಾಡ ಹೋಗಿ ತಾನು
ಕೂಪದೊಳಗೆ ಬಿದ್ದು ನಲುಗಿ
ಕೊನೆಗೆ ತಪ್ಪು ತಿಳಿದು ಮರುಗಿ
ಬಸವಳಿದು ಜಗದ ಒಳಗೆ..

ಮುಂದೆ ಒಂದು ಜನ್ಮ ಬೇಡಿ
ತಪ್ಪೊಪ್ಪುತ ಸರಿಪಡಿಸಲೆಂದು
ಕಾಣದ ದೇವಗೆಲ್ಲ ಮೊರೆದು
ಹರಕೆ ಹೊತ್ತು, ಪೂಜೆಗೈದು...

ಬಂದ ಕಾರ್ಯ ಮುಗಿಯಿತು
ಹೋಗೋ ಸಮಯ ಬಂದಿತು..
@ಪ್ರೇಮ್@
23.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ