ಗುರುವಾರ, ಫೆಬ್ರವರಿ 14, 2019

772. ಮಲೆಕುಡಿಯರ ಹಾಡು-1

ಮಲೆಕುಡಿಯರ ಹಾಡು

ನಾವು ಮಲೆಕುಡಿಯರು
ಕಾಡು ಮಾತೆಯೆಮ್ಮಯ ತಾಯಿ
ಕಾಡತ್ಪತ್ತಿಯೇ ನಮಗಾಧಾರ..
ಲಾಲಾಲ ಲಾಲಾ..

ಬೆತ್ತ ಕಡಿದು ಬುಟ್ಟಿ ಹೆಣೆದು
ಆಹಾಹಾಹಾ
ಬಿದಿರು ಕಡಿದು ತಟ್ಟಿ ಹೆಣೆದು
ಓಹೋಹೋಹೋ..
ಇದುವೆ ನಮ್ಮ ಕಾಯಕ..
ಕೈಲಾಸವೆಮಗೆ ಕಾಯಕ...

ಕಾಡುಸೊಪ್ಪು ಗೆಡ್ಡೆ ಗೆಣಸು
ಆಹಾಹಾಹಾ..
ಕೆಸುವಿನೆಲೆ... ಬೈನೆ ದಿಂಡು..
ಓಹೋಹೋಹೋ...
ಇದುವೆ ನಮ್ಮ ಆಹಾರವು..
ವಿಷರಹಿತ ಊಟವೂ...

ನೀರಿಗಿಲ್ಲ ನಿತ್ಯ ಬರಗಾಲ...
ಅಹಾಹಾಹಾ..
ವಿಷವ ಹಾಕಿ ನಾವು ಕೊಲ್ಲುವುದಿಲ್ಲ
ಓಹೋಹೋಹೋ...
ಮರವು ನಮ್ಮ ತಾಯಿಯು
ಧರೆಯೇ ನಮ್ಮ ಮನೆಯೂ..

ಕಾಡ ಎಲೆಯ ತೋರಣ
ಆಹಾಹಾಹಾ...
ಕಾಡು ಪ್ರಾಣಿ ಪ್ರೇರಣ..
ಓಹೋಹೋಹೋ..
ನಮಗೆ ನಾವೇ ಶೂರರೂ
ಹುಲಿಯನೆದುರಿಸೊ ಧೀರರೂ..

ಅಜ್ಜ ಅಪ್ಪನಿಂದ ಕಲಿತ ವಿದ್ಯೆ
ಆಹಾಹಾಹಾ..
ಅಮ್ಮ ತಾನೇ ನಮಗೆ ವೈದ್ಯೆ..
ಓಹೋಹೋಹೋ
ನಾಟಿ ಎಲೆಯು ಕಾಂಡ ಬೇರು
ಗಿಡ ಮರಗಳೆ ನಮಗೆ-ಮದ್ದು..

@ಪ್ರೇಮ್@
14.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ