ಭಾನುವಾರ, ಫೆಬ್ರವರಿ 17, 2019

782. ಕವನ-ಬದುಕು

ಬದುಕು

ಅಸಲು, ಬಡ್ಡಿಯ ಲೆಕ್ಕಾಚಾರ
ಹಾಕುವೆಯಾ ಗೆಳೆಯ ಬದುಕಿನಲಿ..
ನಿನ್ನ ಹೆತ್ತಮ್ಮನಿಗೆ, ಅಸಲು ಬಿಡು
ಬರಿಯ ಬಡ್ಡಿಯನಾದರೂ ಕೊಡಬಲ್ಲೆಯಾ ನೀ?

ಹೊತ್ತು, ಜವಾಬ್ದಾರಿಯಿಂದಲಿ
ಸಲಹಿದ ತಂದೆಯ ಋಣವ ತೀರಿಸಬಲ್ಲೆಯಾ?
ಜೀವನದುದ್ದಕೂ ಕೈ ಹಿಡಿದು ನಡೆಸಿದ,
ಎರಡನೆ ತಾಯಿಯಾದ ಪತ್ನಿಯ
ಸಹಾಯಕೇನು ಕೊಡಬಲ್ಲೆ ತಿರುಗಿ?

ಅಸಲಿಗೆ ನೀನೇ ಭೂಮಿಗೆ ಬಂದ ಅತಿಥಿ
ನೀನೇನ ತೀರಿಸಬಲ್ಲೆ ಭೂತಾಯ ಋಣವ!
ಭಾರತಿ ನಿನ್ನ ಹೊತ್ತ ಮಾತೆ.
ಏನ ಕೊಟ್ಟಿರುವೆ ನೀನು ದೇಶಕೆ?

ಕೆಲ ಸಂಘ, ಸಂಸ್ಥೆಗಳ  ಹೊರತಾಗಿ
ಕೇಳಿಲ್ಲ ಯಾರೇನೂ ನಿನ್ನಲಿ..
ಬಂದಿರುವೆ ಬರಿಗೈಲಿ, ಹೋಗಲಿರುವೆ ಹಾಗೆಯೇ..

ಉಳಿಸಿ ಹೋಗು ನಿನ್ಹೆಸರನು
ಬಾಳ ಹೇದ ಸಂತೆಯಲಿ..!
ಬಂಡೆ ಬರಹದಲ್ಲಲ್ಲ, ಜನರೆದೆಯಲಿ..
ಮನಸ ಗೂಡಲಿ, ಮೆದುಳ ನೆನಪಲಿ..

@ಪ್ರೇಮ್@
18.02.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ