ನವ ವಧು ಪದುಮಳು ಬಂದಾಗ. ( ಪ್ರೇಮಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಕ್ಷಮೆ ಕೋರಿ)
ಪದುಮಳು ಬಂದಳು ರಾಯರ ಮನೆಗೆ ರಾತ್ರಿಯಾಗಿತ್ತು.
ರಾಯರು ಹುಡುಕಿದರು ಬೀಗದ ಕೈಯ ದೊರಕದಾಕಿತ್ತು.
.ಕೀಲಿಯು ಸಿಗದೆ ರಾಯರ ಮುಖವು ಕೆಂಪಗೆ ಆಗಿತ್ತು.
ಪದುಮಳ ಮುಖದಲಿ ದುಗುಡವು ಮೂಡಿತ್ತು
.ಹೂವಿನ ಅಂಗಡಿ ಮುಡಿದ ಹುಡುಗಿಯ ಕೂಡಿಸಿ ರಾಯರು
ಓಡಿದರು ಆತುರದಿ .
ಬಸ್ಸನು ಹತ್ತಿ ಪೇಟೆಯ ಜವಳಿ ಅಂಗಡಿ ಕಡೆಗಲ್ಲಿ
.
ರಾಯರ ಕಂಡು ಶೆಟ್ಟರು ಕೇಳಲು
ರಾಯರ ನುಡಿದರು ಕಳೆದಿದೆ ಕೀಲಿ ಕೈಯಿ
ಬಿಟ್ಟನೆ ಇಲ್ಲಿ.
ಹುಡುಕಿರಿ ಜವಳಿಯಲಿ
.ಏಳಲಾರದೆ ಎದ್ದ ಶೆಟ್ಟರು ಬಿದ್ದರು ಭಾರದಲಿ
ಎತ್ತಿದ ರಾಯರು ನಗುತಲಿ ನುಡಿದರು ನಿಮ್ಮ ಹಣಕಿಂತ ನೀವ್ ಹಗುರ.
ರಾಯರು ನಡೆದರು ಹುಡುಕುತ ಕೀಲಿ ಬೀದಿಯಲಿ, ಓಣಿಯಲಿ ಬೆಳಗಿನಿಂದ ಬಂದ ಹೋದ ಜಾಗಗಳಲಿ
ಹುಡುಕುತ ಅಳುಮೋರೆಯಲಿ.
ರಾಯರ ಪಾಡನು ಕಾಣುತ ಜನಗಳು ನಕ್ಕರು ಹಾಸ್ಯದಲಿ
ರಾಯರು ಮರಳಲು ಕೀಮಾಡುವನೊಂದಿಗೆ ಪದುಮಳ ಹೂ ನಗೆಯು
ಕೀಯ ಮಾಡಿ .ಹಣ ಕೊಡಲು ಚಡ್ಡಿಗೇ ಕೈ ಹೋಯ್ತು .ಪರ್ಸಲಿ ಕೀಲಿಯು ನಗುತ್ತಿತ್ತು ರಾಯರ ಜೇಬಲಿ ನಗುತ್ತಿತ್ತು.
ರಾಯರು ಅಲ್ಲಿಯೆ ಕೀಯನು ಬಿಟ್ಟು ಗುಟ್ಟಾಗಿಟ್ಟರು ಪದುಮಮಳಲಿ .
ಕೀಯವ ಹೋಗಲು ಲಕುಮಳು ನಕ್ಕಳು ರಾಯರ ನೋಡುತಲಿ.
ರಾಯರ ಗುಟ್ಟು ಗುಟ್ಟಾಗುಳಿಯಿತು ರಾಯರು ಹೇಳದೆಯೆ.
ಪದುಮಳು ಕೇಳದೆಯೆ.
ಕವನವ ಓದುತ ಪದುಮಳು ನಕ್ಕಳು ಹಳೆಯದು ನೆನಪಾಗಿ .
ನಾ ಹೇಳುವಳಿದ್ದೆ ಹಾರುತ ಹೊರಟಿರಿ ಮಾರುತಿರಾಯ ತಡೆಯಲು ನಾನಾರು.
ಕೇಳದೆ ನನ ಮಾತ
ಗಾಬರಿ ಮಲ್ಲರು
ಹೇಳುವಳಿದ್ದೆ ಬಿಟ್ಟರೆ
ನೀವ್ ತಾನೆ. ಆಹಹಾ ಬಿಟ್ಟರಾ ನೀವಾಗ.
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
1. ಶಿವಪ್ರಸಾದ್ ಆರಾಧ್ಯರ ಕವನ ನವವಧು...
🍏🍏🍏🍏🍏🍏🍏🍏
ಬದುಕಿನ ಒಂದು ಸುಂದರ ಘಟನೆಯ ಸುತ್ತ ನೇಯ್ದ ಸುಂದರ ಸರಳ ಕವನ.
🍏🍏🍏🍏🍏🍏🍏
ಮೈಸೂರು ಮಲ್ಲಿಗೆಯ ಕವಿಯನ್ನು ಮತ್ತೆ ನೆನಪಿಸಿದಕ್ಕೆ ಧನ್ಯವಾದಗಳು ಸರ್.
🍏🍏🍏🍏🍏🍏🍏
ಮದುಮಗಳ ಬರುವಿಕೆಯ ಖುಷಿಯಲಿ ಮರೆವಿನ ಹಿತ ಸ್ಪರ್ಶಕೆ ಅನುವು ಮಾಡಿ ಕೊಟ್ಟ ನಿರರ್ಗಳ ಕವನ.
🍏🍏🍏🍏🍏🍏🍏
ಹಾಡಲು ಯೋಗ್ಯ ವಾಗಿದೆ.
🍏🍏🍏🍏🍏🍏
ಧನ್ಯವಾದಗಳು ಸರ್...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ