ಮಲೆಕುಡಿಯರ ಹಾಡು
ನಮ್ಮ ಬದುಕದೂ... ನಿಮಗಪರೂಪ
ಪೇಟೆ ಜೀವನಾ..ನಮಗಪರೂಪ..
ಹೈೂಯ್ಯಾರೆ ಹೈೂಯ್ಯಾರೆ ಹೈೂ...//
ನಾರು ಬೇರು ಗೆಡ್ಡೆ ಗೆಣಸು
ನಮ್ಮ ಊಟವೂ..
ಎಲೆಯು, ಬೇರು, ಬಳ್ಳಿ, ಕಾಂಡ
ನಮಗೌಷಧವೂ..
ಹೈೂಯ್ಯಾರೆ... ಹೈೂ//
ಮನೆಯೆ ನಮಗೆ ಕಾಡ ಬಯಲು..ಆಹಾಹಾ..
ಗಿಡ ಮರಗಳೆ ಗುರುವರ್ಯರು ..ಓ..ಹೋ..ಹೋ..
ಪಶುಪಕ್ಷಿಗಳೆಮ್ಮ ಒಡನಾಡಿಗಳು...ಕೇಳ್ರಪ್ಪೋ..
ಹೊಯ್ಯಾರೇ...ಹೈೂ//
ಮಳೆಯು ನಮಗೆ ಗೆಳೆಯರಣ್ಣ..ಆಹಾಹಾ..
ಮೋಡ ನಮ್ಮ ನೆಂಟನಣ್ಣ..ಓ..ಹೋ..ಹೋ..
ಮರದ ಕಾಯಿ ಹಣ್ಣುಗಳು ನಮ್ಮ ಬೆಳೆಸೋ ದೇವರಣ್ಣಾ...ಹೊಯ್ಯಾರೇ...ಹೈೂ//
@ಪ್ರೇಮ್@
17.02.2019
ಪ್ರೇಮಾ ಉದಯಕುಮಾರ್ ರವರ ಮಲೆಕುಡಿಯರ ಆಹಾರ ವಿಹಾರ ಅಚಾರ ವಿಚಾರಗಳನ್ನು ಕುರಿತು ಒಂದು ಜನಾಂಗದವರ ಸಂಪ್ರದಾಯ ರೀತಿ ರಿವಾಜುಗಳನ್ನು ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ ಧನ್ಯವಾದಗಳು.
ಲತಾ ಧರಣೇಶ್, ಕಡೂರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ