ಲೇಖನ
ನಿಸರ್ಗವ ಕೆಡಿಸಿ ನಿರ್ಗತಿಕರಾಗದಿರೋಣ..
ನಿಸರ್ಗ ನಮಗೆ ಸ್ವರ್ಗ. ನಿಸರ್ಗ ಸ್ವಚ್ಛವಾಗಿರೆ ಉತ್ತಮ ಗಾಳಿ, ನೀರು, ಆಹಾರ! ಇಲ್ಲದಿರೆ ಪೂರ್ತಿ ವಿಷಾಹಾರ.. ಯಾರು ನಿಸರ್ಗವನ್ನು ದೇವರಂತೆ ಪೂಜಿಸುತ್ತಿದ್ದರೋ, "ಬೆಳಗಾಗೆದ್ದು ಯಾರ್ಯಾರ ನೆನೆಯಲಿ..
ಎಳ್ಳು ಜೀರೀಗಿ ಬೆಳಿಯೋಳ...
ಎದ್ದೊಂದು ಗಳಿಗಿ ನೆನೆದೇನ.." ಅಂತ ಅನಕ್ಷರಸ್ಥ, ಹೃದಯ ಶ್ರೀಮಂತ ಹಳ್ಳಿಗರು ಭೂಮಿ ತಾಯಿಗೆ ಪೂಜೆ ಮಾಡಿ ಶೃಂಗರಿಸಿ ಆರಾಧಿಸಿಕೊಂಡು ಬಂದರು.
ಈಗಿನ ಅಕ್ಷರಸ್ಥ ಮೂಢರಿಗೆ ಮುಂದಿನ ಪೀಳಿಗೆಗೆ ನಿಸರ್ಗದ ಉಳಿವಿನ ಚಿಂತೆಯಿಲ್ಲ, ಬದಲಾಗಿ ಮತ್ತಷ್ಟು ಮಗದಷ್ಟು ಕಿತ್ತು ತಿನ್ನುವ ಹಂಬಲ. ವಿಷ ಹಾಕಿಯಾದರೂ ಭೂಮಿಯಿಂದ ಹೈಬ್ರಿಡ್ ಬೆಳೆ ತೆಗೆಯಬೇಕು, ತಿಂದವ ಏನಾದರಾಗಲಿ, ತನಗೆ ಹಣ ಬರಬೇಕು ಕೈತುಂಬಾ. ಮತ್ತೆ ಕೆಲವರು ದಪ್ಪವಾದ, ಉತ್ತಮ ಜಾತಿಯ ಮರಗಳನ್ನು ಕಡಿದು ಮಾರಿ ಸಂಪಾದಿಸುವವರು, ಕಾಡಿನ ಉತ್ಪನ್ನಗಳು, ಮಾಂಸ-ಚರ್ಮಕ್ಕಾಗಿ ಪ್ರಾಣಿಗಳನ್ನು ಹಿಡಿದು ಮಾರಿ ಬದುಕುವವರು ಪರಿಸರ ಎನ್ನುವ ನಿಸರ್ಗವನ್ನುಳಿಸಲು ಸಾಧ್ಯವೇ?
ದೇವಿಯಂತೆ ಆರಾಧಿಸಿಕೊಂಡು ಬಂದ ಹಿರಿಯರು ಸುಗ್ಗಿ ಹಬ್ಬ, ಸಂಕ್ರಾಂತಿ ಹಬ್ಬ, ಭೂಮಿ ಹುಣ್ಣಿಮೆ, ಎಳ್ಳಮವಾಸ್ಯೆ..ಹೀಗೆ ನಿಸರ್ಗಕ್ಕೆ ಸಂಬಂಧಿಸಿದ ಹಬ್ಬಗಳನ್ನಾಚರಿಸಿ ಪ್ರಕೃತಿ ಪೂಜೆ ಮಾಡಿ, ನಿಸರ್ಗವನ್ನು ಚೆನ್ನಾಗಿಟ್ಟರೆ ಈಗಿನವರಿಗೆ ಅದೆಲ್ಲ ಅಂಧಾನುಕರಣೆ, ಮೂಢನಂಬಿಕೆ!
ಪ್ರಕೃತಿಯನ್ನು ಮಾತೆಯಂತೆ ಕಂಡು ಪೂಜಿಸಿ, ಗೌರವಿಸಿ, ಅದಕ್ಕೆ ಸರಿಯಾಗಿ ಬದುಕಿದಾಗ ಮಾತ್ರ ನಿಸರ್ಗವೂ ನಮ್ಮನ್ನು ಸಾಕಬಲ್ಲುದು. ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ