ಗುರುವಾರ, ಫೆಬ್ರವರಿ 14, 2019

770. ಗುರುವಿಗೆ ಕೋರಿಕೆ

ಗುರುವಿಗೆ ಬೇಡಿಕೆ

ಮತ್ಸರದ ಜನರ ನಡುವೆ
ಪ್ರೀತಿಯ ಹಂಚುತ ಬಾಳುವ,
ಮೇಲುಕೀಳಿನ ಬೀಜ ಬಿತ್ತುವವರ ಮಧ್ಯೆ
ಸಮಾನತೆ ಕಾಯುತ
ಬಾಳಲನುವು ಮಾಡಿಕೊಡು ಗುರುವೇ..

ತನ್ನವರ ಜರಿವವರ ಜೊತೆ
ಅವರ ಕ್ಷಮಿಸಿ,ತಪ್ಪು ಮರೆಯುವ
ತಾ ತುಳಿದ ಏಣಿಯನೆ ಬೀಳಿಸುವ
ಕೃತಘ್ನರನೂ ಪ್ರೀತಿಸುವ
ಸಹೃದಯವ ಕೊಡು ಗುರುವೇ..

ನೆಮ್ಮದಿಯಲಿ ಬಾಳಲು ಬಿಡದ
ಚಾಡಿಕೋರರ ನೆರಳೆನಗೆ ಬೀಳದೆ,
ಸಹಕಾರವ ಮರೆತು, ಹೃದಯದಿ ಕಹಿ ಕಕ್ಕುವವಗೆ
ಸ್ನೇಹ ಧಾರೆಯೆರೆವ ಮನ ನೀಡು ಗುರುವೇ..

ಮಾತಲಿ ಸರ್ವರ ಮರುಳು ಮಾಡುತ
ತಮ್ಮ ಬೇಳೆ ಬೇಯಿಸಿಕೊಳುತ
ತಾನೆ ಮೇಲೆಂದು ಜಂಬ ಕೊಚ್ಚಿಕೊಳುತಲಿ
ಇತರರ ನೀಚ ದೃಷ್ಟಿಯಿಂದ ನೋಡುವ
ಮನುಜರ ಏಳಿಗೆಯಾಗಲೆಂದು ಪ್ರಾರ್ಥಿಸುವ ಹೃದಯ ನೀಡು ಗುರುವೇ..

@ಪ್ರೇಮ್@
14.02.2019
*ಗುರುವಿಗೆ ಬೇಡಿಕೆ*
*ಪ್ರೇಮ್*

ಸಮಸ್ತ ಜಗದೊಳಗೆ ಅಶಾಂತಿ, ಅಸಹಕಾರ,ದ್ವೇಶ ,ಮತ್ಸರ ತುಂಬಿ ತುಳುಕುತ್ತಿದೆ...ಏಳಿಗೆಯ ನೆಪದಲ್ಲಿ ಅವನತಿಯತ್ತ ಸಾಗುತ್ತಿದ್ದಾನೆ ಮನುಜ..ಎಲ್ಲರಿಗೂ ಏಳಿಗೆಯಾಗಲೆಂದು ಪ್ರಾರ್ಥಿಸುವ ಹೃದಯವ ಎನಗೆ ನೀಡು ಎಂದಿದ್ದಾರೆ..ಉತ್ತಮ ಸಾಹಿತ್ಯ ಕವನ ಸೊಗಸಾಗಿದೆ

ಧನ್ಯವಾದಗಳು

*ಶ್ಯಾಮ್ ಪ್ರಸಾದ್*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ