ಹೀಗೆ...
ಮಂತ್ರಕ್ಯಾವತ್ತೂ ಮಾವಿನ ಕಾಯಿ ಬಿದ್ದಿಲ್ಲ..
ತಾಯಿಗೆ ಮಕ್ಕಳದೆ ಮಂತ್ರ
ತಂದೆಗೆ ಮನೆ ನಿಭಾಯಿಸುವ ಜವಾಬ್ದಾರಿಯೇ ಮಂತ್ರ
ಮಕ್ಕಳಿಗೆ ಓದೇ ಮಂತ್ರ!
ಪ್ರಿಯಕರನಿಗೆ ಪ್ರೇಯಸಿಯ ಮಂತ್ರ
ವಿದ್ಯೆಗೆ ಜ್ಞಾನಾರ್ಜನೆಯೇ ಮಂತ್ರ!
ಗುರುವಿಗೆ ಶಿಷ್ಯರೆ ಮಂತ್ರ
ಮುಪ್ಪಿನ ಹಿರಿಯರಿಗೆ ಊರುಗೋಲೆ ಮಂತ್ರ!
ರೋಗಕೆ ಮದ್ದೇ ಮಂತ್ರ
ಮನೋರೋಗಕೆ ಧೈರ್ಯವೆ ಮಂತ್ರ,
ಜೀವಿಗಳಿಗೆ ಬದುಕುವ ಬಲವೇ ಮಂತ್ರ
ದೇವರಿಗೆ ಭಕ್ತಿಯ ಕಾಯಕವೇ ಮಂತ್ರ!
ನಾಯಕರಿಗೆ ನಾಯಕತ್ವವೇ ಮಂತ್ರ
ವೈದ್ಯರ ಭರವಸೆಯ ಮಾತುಗಳು ರೋಗಿಗೆ ಮಂತ್ರ
ರವಿಯ ಆಗಮನ ಬುವಿಗೆ ಮಂತ್ರ
ನೆಮ್ಮದಿ, ಆರೋಗ್ಯವೇ ಬಾಳಿನ ಮಂತ್ರ!
ಬೇಕಾಗಿದೆ ಸರ್ವರಿಗೆ ಸಮಾನತೆಯ ಮಂತ್ರ!
ಅದರೊಂದಿಗೆ ನಿಷ್ಕಲ್ಮಶ ಪ್ರೀತಿಯ ಯಂತ್ರ!!
@ಪ್ರೇಮ್@
18.02.2019
ಪ್ರೇಮ್ ರವರ ಹೀಗೆ...ಕವನವು
ಮಾನವನ ವಿವಿಧ ವೃತ್ತಿಗಳ, ಆಯಾಮಗಳ, ಜವಾಬ್ದಾರಿಗಳ ಮೇಲೆ ಬೆಳಕು ಚೆಲ್ಲುತ್ತಾ ಸಾಗಿದೆ.
ತಂದೆ,ತಾಯಿ ,ಗುರು,ಶಿಷ್ಯ, ವೈದ್ಯ ,ರೋಗಿ, ಮುಪ್ಪು,ಊರುಗೋಲು,
ರೋಗ, ಮದ್ದು, ರವಿ,ಬುವಿ,ಹೀಗೆ ಇವರೆಲ್ಲರಿಗೂ ನಿಷ್ಕಲ್ಮಶ ಪ್ರೀತಿಯ ಯಂತ್ರಕೆ ಬೇಕಾಗಿದೆ ಸಮಾನತೆಯ ಮಂತ್ರ ಸೂಪರ್ ರಿ ಕವನ ಅದ್ಭುತವಾಗಿದೆ.
ಮಾಳಪ್ಪ ನಂದ್ಯಾಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ