ಮಲೆಕುಡಿಯರ ಹಾಡು
ಬದುಕದು ನಮ್ಮಯ ವಿಸ್ಮಯ ಕೇಳಿರಿ
ಕಾಡಿನ ಮಕ್ಕಳು ನಾವಣ್ಣ..
ನಮ್ಮಯ ಬಾಳುವೆ ಕಾಡಲೆ ಇಹುದು
ಮಣ್ಣಿನ ಮಕ್ಕಳು ನಾವಣ್ಣ....
ಹೈೂಯ್ಯರೆ ಹೈೂಯ್ಯಾರೆ ಹೈೂ...
ಓಟೆಹುಳಿ , ಜಿರಕಿನ ಹುಳಿ
ದೊಡ್ಡಲ ಹುಳಿ, ಗಜನಿಂಬೆ
ಹುಣಸೇ ಹುಳಿ, ಮಂತು ಹುಳಿ..
ಇವುಗಳೆ ನಮ್ಮ ಸಹಪಾಟಿಗಳಮ್ಮಾ.......ಹೈೂ..
ಕೆಸುವಿನ ಸೊಪ್ಪು, ಗೆಡ್ಡೆ, ಬೈನೆಯ ದಿಂಡು
ಬಾಳೆಯ ದಿಂಡು, ಹಣ್ಣು, ಬಳ್ಳಿಯ ಬೆಣ್ಣೆ ಗೆಡ್ಡೆ
ನಮ್ಮ ಹಬ್ಬದಡುಗೆಯ ಆಹಾರವಣ್ಣ....ಹೈೂ..
ಎರೆಹುಳ ಕೋಲಿಗೆ ಕಟ್ಟಿ
ಮೀನು, ಏಡಿಗಳ ಹಿಡಿವೆವು ಅಣ್ಣ..
ಮೊಲವೋ, ಕಾಡು ಕೋಳಿಯೋ ಸಿಕ್ಕರೆ
ಸವಿರುಚಿ ನಮಗದು ಅಣ್ಣಾ...ಹೈೂ..
ಬಿದಿರನು ತಂದು ಬುಟ್ಟಿಯ ಹೆಣೆದು
ಓಟೆಯ ತಂದು ಮೊರವನು ಮಾಡಿ
ಮುಂಡುಗದೆಲೆಯಲಿ ಚಾಪೆಯ ಹಾಸುವೆವೋ ಅಣ್ಣಾ....ಹೈೂ..
ಮನೆಮಠವೆಮಗೆ ಮರ, ಮಣ್ಣಲ್ಲೆ..
ಕಾಡಿನ ಜೀವಿಗಳು ಗೆಳೆಯರೆ ಅಲ್ವೇ..
ತಾವೂ ಬದುಕುತ ಬದುಕಲು ಬಿಡುವವರೂ...ನಾವಣ್ಣಾ..ಹೈೂ..
ನಾವು ಕಾಡಿನ ಕಂದರಣ್ಣಾ...
ನಾವು ಮಣ್ಣಿನ ಮಕ್ಕಳಣ್ಣಾ..
ಹೈೂ...ಹೈೂ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ