ನಾವೇನು ಕಡಿಮೆ
ಭಾರತಿಯು ನಮ್ಮ ಹೆತ್ತು ಹೊತ್ತ ತಾಯಿಯಲ್ಲವೇ
ಭಾರತ ಮಾತೆಯ ಹೆಮ್ಮೆಯ ಯೋಧರು ನಾವೆಂದಿಗಿಲ್ಲವೇ?
ಸತ್ಯ ಶಾಂತಿಗಾಗಿ ತಲೆಯ ಕೊಡಲು ಹಿಂಜರಿಯೆವು
ವೈರಿ ನಮ್ಮ ಕೆಣಕಿದರೆ ಸುಡದೆ ಎಂದು ಬಿಡೆವು..
ನಮ್ಮ ತಾಯಿ ಋಣವ ತೀರಿಸಲು ಒಂದಾಗುವೆವು
ಶತ್ರುಗಳ ಮೆಟ್ಟಿ ನಿಂತು ರಕ್ತ ಚಿಮ್ಮಿ ಬಿಡುವೆವು..
ನಾದ ವೇದ ಗಾನ ವೈದ್ಯ ಯಾವುದರಲಿ ಕಡಿಮೆ?
ಗುಣದ ಜತೆ ಧೈರ್ಯವಿರಲು ಏಕೆ ನಮಗೆ ಅಂಜಿಕೆ?
ವೈರಿಯನ್ನು ಮೆಟ್ಟಿ ನಿಲ್ಲಲು ಜೀವದ ಹಂಗು ತೊರೆದು ಹೋರಾಡುವೆವು!
ಮನದ ಬಲದ ಮಾತು ಕೇಳಿ ಹೆದರಿ ಎಂದೂ ಓಡೆವು..
ದೇಶ ಕಾಯೋ ಸೈನಿಕರು ಎಂಬ ಹೆಮ್ಮೆ ನಮಗೆ!
ನಾವಿರಲು ಬದುಕಲೆಂದು ಆತಂಕ ಬೇಡ ನಿಮಗೆ!
ಮನೆ ಕುಟುಂಬ ಶಾಲೆ ಎಲ್ಲ ನಮಗೆ ನಮ್ಮ ಭಾರತಿ
ತಿಂದು ಕಲಿತು ಬೆಳೆದ ನೀನು ರಾಷ್ಟರವನ್ನೆ ಬೆಳಗುತಿ.
ಪ್ರೀತಿಯಿರಲಿ ಜನರ ಜೊತೆ ಭೇದವೆಂದೂ ತೋರದೆ
ನಮ್ಮೆಡೆಗೆ ಗೌರವ ಇರಲಿ ತಾತ್ಸಾರವನ್ನು ಬೀರದೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ