13. ಜಯಲಕ್ಷ್ಮಿ ಅವರ
ಭಾರ....
ಭಾವನೆಗಳ ಭಾರದಿ ನಲುಗಿದೆ ಮನ
ಮೂಕ ಮನದ ಮರ್ಮರ ದಿನ ದಿನ
ಅಂತರಂಗದಿ ಅಚ್ಚೊತ್ತಿದ ಚಿತ್ತಾರ
ಕಾಣೆಯಾಗುತಿದೆ ಕ್ಷಣ ಕ್ಷಣ.....
🌽🌽🌽🌽🌽🌽
ಉತ್ತಮ ಕವಿಭಾವ. ಭಾವನೆಗಳು ಜೀವನದಿ ಭಾರವಾಗಬಾರದು ಗೆಳತಿ.ಖುಷಿ ತರಬೇಕು.ಜೀವನವೂ ಅಂತರಂಗದಿ ನಲುಗಬಾರದು. ನಮ್ಮ ಬದುಕಿಗೆ ನಾವೇ ಹೊಣೆಯಲ್ಲವೇ..
🌽🌽🌽🌽🌽🌽
ಹೃದಯದ ಬಾಗಿಲು ಶಿಥಿಲವಾಗಿದೆ
ಹಾಕಿದ ನೆನಪ ಬೀಗ ತುಕ್ಕು ಹಿಡಿದಿದೆ
ಕೊಂಡಿ ಕಳಚಿ ಬೀಳಲು ಸನ್ನಧ್ಧವಿದೆ
ಭಯದ ಭೂತ ಘೀಳಿಡುತ್ತಿದೆ.....
🌽🌽🌽🌽🌽🌽🌽
ನೆಗೆಟಿವ್ ಶೇಡ್ ನ ಕವನವಿದು. ಓದುವಾಗ ಶೇಕ್ಸ್ ಪಿಯರ್ನ ನೆನಪಾಗುತ್ತದೆ. ಭಯದ ಗೂಡಲಿ ಬೆಳೆವ ಮನಗಳೆಡೆಗೆ ಮರುಕ ಹುಟ್ಟುತ್ತದೆ.
🌽🌽🌽🌽🌽🌽
ಬೀಗವಿಲ್ಲದೆ ತೆರೆದ ಮನೆ ಬರಿದಾಗಿದೆ
ಆಸರೆಯ 'ಕೈ'ಗಾಗಿ ಕಾತರಿಸಿ ಕಾದಿದೆ
ಸಿಗಬಹುದೇ ಕಳೆದುಹೋದ ಕೈ
ಸಿಕ್ಕರೂ ಭದ್ರವಾಗಿ ನಿಲ್ಲಬಹುದೇ.??
🌽🌽🌽🌽🌽🌽🌽
ಮುಗ್ದ ಅನಾಥ ಮಕ್ಕಳ ನೋವು ಮನ ಕಲಕುತ್ತದೆ. ಭಾವನೆಗಲ್ಲಿ ಬೆಲೆಯೇ ಇಲ್ಲ. ಚಾರ್ಲ್ಸ್ ಡಿಕೆನ್ಸ್ ನ ಒಲಿವರ್ ಟ್ವಿಸ್ಟ್ ನೆನಪಾಯಿತು.
🌽🌽🌽🌽🌽🌽🌽
ಎದೆಯ ಬಂಗಲೆಗೆ ಅರಿವಿನ ಮೊಳೆ ಹೊಡೆಯಬೇಕಿದೆ,ಜ್ಞಾನದ ದೀಪ
ಆರದಂತೆ ಬೆಳಗಿಸಬೇಕಿದೆ,ಬದುಕಿಗೆ
ಸತ್ಪಾತ್ರದ ಅಷ್ಠದಿಗ್ಬಂಧನ ಬೇಕಾಗಿದೆ.
🌽🌽🌽🌽🌽🌽
ಕೊನೆಯಲ್ಲಿ ಅಷ್ಟ ದಿಗ್ಬಂಧನದ ಕೀಲಿಕೈ ಸಿಕ್ಕಿದೆ ಎಂದಿದ್ದರೆ ಅಡ್ಮಿನ್ ರವರು ಕೊಟ್ಟ ವಿಚಾರ ಸಂಪೂರ್ಣ ವಾಗುತ್ತಿತ್ತೇನೋ... ಮಗದೊಂದು ಚರಣ ಸೇರಿಸಿ ಧನಾತ್ಮಕ ಕೊನೆಯಿರಲಿ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ