ಬುಧವಾರ, ಫೆಬ್ರವರಿ 13, 2019

766. ಹೇಗೆ

ಹೇಗೆ?
ಒಮ್ಮಿಂದೊಮ್ಮೆಲೆ ಮೋಡವು ಬಡಿದು
ಮಿಂಚದು ಹಾರಿ, ಮಳೆಯದು ಸುರಿದು
ನಿತ್ಯದ ಕರ್ಮದಿ ಮುಂಗೋಪವ ತಳೆದು
ಸೂರ್ಯನು ಗಂಟೆ ನಾಲ್ಕಕೇ ಬಂದು...

ಅಣ್ಣ ತಮ್ಮಂದಿರು ತಲೆಯನು ಒಡೆದು
ಮೌನದ ಧರೆಯದು ಏಳುತ ಕುಣಿದು
ಗಾಳಿಯು ಬೀಸುತ ನರ್ತನ ಗೈದು
ನೀರದು ಹರಿಯುತ ದಡದೆಡೆ ಬಂದು...

ರಕ್ತವು ಎದೆಯಿಂದ ಹೊರಗಡೆ ಹರಿದು
ಮನದ ಭಾವಗಳು ಎಲ್ಲೆಡೆ ತಿಳಿದು
ಕೋಪದಿ ಅಗ್ನಿಯು ಎಲ್ಲರ ಬಳಿದು
ಸರ್ವನಾಶಕೆ ದೇವನೆ ಕರೆದು..

ಗಿಡಮರಗಳ ಮನುಜ ತಾ ಕಡಿದು
ನೇಸರ, ಇಳೆ, ವಾಯು, ಆಗಸ ಸಿಟ್ಟೆದ್ದು
ಒಮ್ಮಿಂದೊಮ್ಮೆಲೆ ಎಲ್ಲರು ನಡುಗಿ
ಭೂಮಿಯಲೆ ಅವಸಾನ ಜೀವಕೆ ಕೊನೆಗೆ..
@ಪ್ರೇಮ್@
13.02.2019

ಪ್ರೇಮ್ ಅವರ ಕವಿತೆ
🌿ಹೇಗೆ 🌿
👉ಅರ್ಥಪೂರ್ಣವಾಗಿದೆ
👉ಒಮ್ಮಿಂದೊಮ್ಮೆಲೆ ಮೋಡದ ಆರ್ಭಟ
👉ಮಳೆರಾಯನ ಕರೆ
👉ಮನುಜನು ಮಾಡುವ ತಪ್ಪುಗಳು
👉ನೇಸರ ಇಳೆ ವಾಯು ಸಿಟ್ಟಿಗೇಳುವ   ಕವಿತೆ 👌👌

✍  ಶ್ರೀಮತಿ ಲತಾ ಧರಣೇಶ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ