ಸೋಮವಾರ, ಫೆಬ್ರವರಿ 25, 2019

801. ವಿಮರ್ಶೆ-5

5. ಶ್ಯಾಮಣ್ಣನವರ

*ಮನಕೇಕೋ ಭ್ರಾಂತಿ*

ಸಿಟ್ಟು,ಸಿಡುಕಿನ ಮನವೇ
ನನ್ನವಳ ನೀ ತೊರೆದೆ
ಅವಳ ಇರುವಿನ ಸುಳಿವ
ಏಕೇ ಸುಡುತಿ..

🍇🍇🍇🍇🍇🍇🍇🍇

ಮನಕೆ ಹೇಳುವ ಮಾತಿನ ಪರಿಯ ಕವಿ ಭಾವ ಚೆನ್ನಾಗಿದೆ. ಪದ ಲಾಲಿತ್ಯ ಉತ್ತಮವಾಗಿ ಮೂಡಿಬಂದಿದೆ.

🍇🍇🍇🍇🍇🍇🍇

ನನ್ನ‌ ಮನವದು ನಕ್ಕು
ಮಗದೊಮ್ಮೆ ನೆನಪಿಸಿತು
ನಿನ್ನ ಒಳಗಿರುವವಳ
ಏಕೇ ಹೊರಗಿಡುತಿ..

🍇🍇🍇🍇🍇🍇🍇

ಆದಿ, ಅಂತ್ಯ, ಮದ್ಯ ಪ್ರಾಸದ ಪದಗಳಾಟ ಚೆನ್ನಾಗಿ ಮೂಡಿಬಂದಿದೆ.

🍇🍇🍇🍇🍇🍇🍇

ಏನು ಅರಿಯದೇ ನಾನು
ಕಣ್ಣೆರಡು ಮುಚ್ಚಿರಲು
ಒಳಗಣ್ಣಿನಲಿ ಇಹಳು
ನನ್ನ ಒಡತಿ..

🍇🍇🍇🍇🍇🍇🍇

ಕೀಲಿಕೈಯನ್ನು ಮನದೊಡತಿಗೆ ಪರ್ಸಾನಿಫೈ ಮಾಡಿರುವುದೇ ಸರ್? ನಾನರ್ಥೈಸಿದ ಕವಿಭಾವ ಸರಿಯೇ...ಸೂಪರ್ಬ್...
🍇🍇🍇🍇🍇🍇🍇

ನನ್ನೊಳಗೇ ಹುಡುಕದೇ
ಹೊರಗೇಕೆ ಹುಡುಕಿದೆನೋ
ಅಸ್ತವ್ಯಸ್ತಿತ ಮನಕೆ
ಕೊನೆಗೂ ಮುಕುತಿ..

🍇🍇🍇🍇🍇🍇🍇🍇
ಮನುಜರೇ ಹಾಗೆ. ತಮ್ಮೊಳಗೆ ಸಾವಿರ ತಪ್ಪುಗಳು, ಕೊಂಕುಗಳನಿಟ್ಟುಕೊಂಡಿದ್ದರೂ ಹೊರಗಿನವರ, ಹೊರ ಜಗತ್ತಿನ ತಪ್ಪುಗಳ ತಿದ್ದಲು, ದೂರಲು ಹೊರಡುವನು. ಇದು ಮನುಷ್ಯರ ಗುಣ. ತನ್ನ ಕಾವಲಿ ತೂತಾದರೂ ಪಕ್ಕದ ಮನೆಯವನ ದೋಸೆ ತೂತೆಂದಂತೆ ಎಂಬ ಗಾದೆಯಂತೆ. ನಾಲ್ಕೇ ನಾಲ್ಕು ಸಾಲುಗಳಲ್ಲಿ ಬಹು ಅರ್ಥ ಕಟ್ಟಿಕೊಟ್ಟಿರುವಿರಿ.

🍇🍇🍇🍇🍇🍇🍇

ಭಾವದೊತ್ತಡದಿಂದ
ಚಿತ್ತ ಚಂಚಲವಾಯ್ತು
ಇರುವವಳ ಹಡುಕಿಸಿದ
ಮನಕೇಕೋ ಭ್ರಾಂತಿ!
🍇🍇🍇🍇🍇🍇🍇
ಹುಡುಕಿಸಿದ..ಎಂದಾಗಬೇಕಿತ್ತು ಪದ. ಪರ್ಸಾನಿಫೈಡ್ ಕವನ ಇಷ್ಟವಾಯ್ತು...
@ಪ್ರೇಮ್@

       ‌‌

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ