ನಮಗೇಕೆ ಯುದ್ಧ
ತಾನು ಸತ್ತು ಹೆಣವ ಬೀಳಿಸುವ
ಕಡು ಪಾಪಿಗಳೆ ನಿಮಗೆ ನೀವೇ
ಪ್ರಶ್ನಿಸಿ ಬಿಡಿ ಒಮ್ಮೆ ನಿಮ್ಮನೆ
ನಮಗೇಕೆ ಕೊಲುವ ಈ ಯುದ್ಧ?
ನಾವಾದರೂ ನೀವಾದರು ದೇಹ
ದೇಹವೆ ಅಲ್ಲವೇ,ಉಸಿರೊಂದೆ ಅಲ್ಲವೇ..
ಮನದ ಭಾವನೆಗಳೊಂದೆ ತಾನೇ?
ಶಾಂತಿ ಮಂತ್ರ ಸರ್ವರಿಗೂ ಬೇಡವೇ?
ಪ್ರತಿ ಬಣ್ಣದ ಬಟ್ಟೆಯ ಒಳಗೂ
ಇರುವ ದೇಹವೊಂದೇ ಅಲ್ಲವೇ?
ಪ್ರತಿ ಭಾಷೆಯ ಪದಗಳಲ್ಲೂ
ಭಾವ ಸಮಾನತೆ ಇಲ್ಲವೇ?
ಗಡಿ ಭಾಗವ ಸೃಷ್ಟಿಸುತಲಿ ಕದ ಬೇಕೆ ಮನಗಳು?
ರಕ್ತಪಾತ ಮಾಡಿಕೊಂಡು ಸೊರಗಬೇಕೆ ಕ್ಷಣಗಳು?
ಪ್ರತಿ ಮನಕೂ ಶಾಂತಿ ಬೇಕು,
ಕೊಡಲಾರೆವೇ ಎಲ್ಲಾ ಮನುಜರು?
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ