ನ್ಯಾನೋ ಕತೆ
ಅಸಹಾಯಕತೆ
"ನಿನ್ನನ್ನು ತುಂಬಾ ಪ್ರೀತಿಸುವೆ"ಎಂದು ಪರಿಪರಿಯಾಗಿ ಬೇಡಿಕೊಂಡಾಗ ರೂಪವಂತೆ ರೂಪ ಧನವಂತನಾದ ಧನ್ವಿತ್ ಶೈನಿಯನ್ನು ಮೊದಲು ನಂಬದಿದ್ದದರೂ ಅವನ ಮಾತಿನ ಪರಿಗೆ ನಂಬಿದಳು. ಬಡತನದಲ್ಲಿ ಬೆಳೆದ ರೂಪಾ ಕನಸಿನ ಸಲೋಕದಿ ತೇಲಾಡಿದಳು. "ಈಗೆಲ್ಲಾ ಕಾಮನ್, ಸುತ್ತಾಡೋಣ ಬಾ" ಎಂದು ಹೊರಗೆ ದೂರ ಕರೆದೊಯ್ದ ಧನ್ವಿತ್ ಅವಳ ನಂಬಿಕೆಗೆ ದ್ರೋಹ ಬಗೆದು ತನ್ನೆಲ್ಲಾ ಕಾರ್ಯ ಮುಗಿಸಿ ತನ್ನಷ್ಟಕ್ಕೆ ತಾನು ಕಾರಲ್ಲಿ ರಾಜಾರೋಷವಾಗಿ ಝುಮ್ಮಂತ ಓಡಾಡುತ್ತಿರುವುದನ್ನು ರಸ್ತೆಯ ಬದಿಯಲ್ಲಿ ನಿಂತು ನೋಡುವುದಲ್ಲದೆ ಇನ್ನೇನೂ ಮಾಡಲಾರದಾದಳು ರೂಪ, ತನ್ನ ವಿಧಿಗೆ ಹಳಿಯುತ್ತಾ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ