ಕಬ್ಬಿನಂತಾಗಬಾರದೇ ಮನುಜ
ಕತ್ತರಿಸಿ ಎಲೆಗಳನೆಲ್ಲ ಮುರಿದು,
ಸಿಪ್ಪೆ ಸುಲಿದು ಬಿಳಿಯ ಮಾಡಿ,
ಲಾರಿಯಲ್ಲಿ ಕಟ್ಟಿ ದೂರ ಸಾಗಿಸಿ,
ಬೇಕೆಂದಲ್ಲಿ ಕೆಳಗೆ ಅದ ಬಿಸಾಡಿ!
ಬೀದಿಯ ಬದಿಯಲಿ ಬಿಸಿಲಲಿ ಇರಿಸಿ,
ಯಂತ್ರದ ಒಳಗಡೆ ಮಡಚುತ ತುರುಕಿ,
ಮತ್ತೆ ಮತ್ತೆ ದೂಡುತ-ಹಿಂಡುತ ತದಕಿ,
ಹಿಮವನು ಯಂತ್ರಕೆ ಮೊದಲೇ ಹಾಕಿ!
ಕಬ್ಬಿನ ನೀರನು ಕುಡಿವನು ಮಾನವ,
ಸಿಹಿಯೇ ಇಲ್ಲೆಂದು ಮತ್ತೆ ಗೊಣಗುವ!
ನೀರು ನೀರೆಂದು ಕಬ್ಬಿಗೆ ಶಪಿಸುವ!
ರೈತನ ಪಾಡದು ಮರೆತೇ ಬಿಡುವ!
ಮನುಜನು ಇರುವನು ದುಷ್ಟತೆ ಬೆಳೆಸಿ,
ಕಬ್ಬನು ನೋಡುತ ಕಲಿಯಬೇಕು ವಸಿ,
ತನ್ನನು ಹಿಂಡುತ ಜಂಡಾಗಿಸಿದರೂ
ಕೊಡುವುದು ತನ್ನಯ ಸಿಹಿನೀರು!
ಬಿಸಿಲಿನ ಬಾಯಾರಿಕೆ ಹಿಂಗುವ ರಸವು!
ದ್ವೇಷವ ಮನದಿಂ ಅಳಿಸುತ ನಡೆಯೆ,
ಪೈಗಂಬರ್, ಯೇಸು, ಬುದ್ಧನ ನುಡಿಯು,
ರಾಮ, ಕೃಷ್ಣ, ಮಹಾವೀರರ ಮಾತು
ಪ್ರೀತಿಯಿಂದ ಬದುಕಲು ಕಲಿಯಿರಿ!
ದ್ವೇಷವ ಬಿಟ್ಟು ಕ್ಷಮೆಯನು ಕಲಿಯಿರಿ.
@ಪ್ರೇಮ್@
03.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ