ಗಝಲ್-71
ಸಡಗರದ ಮಳೆಗಾಲವನು ಅನುಭವಿಸಲು ಬಿಡದು ಶೀತ!
ಸಂಭ್ರಮದ ನೀರಿನೋಕುಳಿಯಲಿ ನೆನೆಯೆ ತಡೆವುದು ಶೀತ!
ಮೂಗಿನೊಳಗೆ ಸುರುಸುರು, ಕೆಳಗಿನಿಂದ ಮೇಲೆಳೆಯುತ್ತಿರಬೇಕು!
ಹೊರಗೂ ಬರದೆ, ಒಳಗೂ ಕೂರದೆ ಕಾಡುವುದು ಶೀತ!
ಒಂದು ಸಲ "ಅಕ್ಷಿ" ಬಂದರೆ ಸಾಕು, ಕಣ್ಣು ಮೂಗಲ್ಲಿ ನೀರು!
ಮೆದುಳಿಗೆ ಕೈ ಹಾಕಿ "ಪರಪರ" ಕೆರೆವುದು ಶೀತ!!
ತಲೆನೋವು ಆಗಲೇ ಕಟ್ಟಿಟ್ಟ ಬುತ್ತಿಯಂತಾಗಿದೆ!
ಮಳೆಯಲಿ ಒದ್ದೆಯಾಗಬೇಡವೆನುವ ಸೂಚನೆ ಕೊಡುವುದು ಶೀತ!
ಬಟ್ಟೆಯೊಂದು ಸದಾ ಕೈಲೇ ಹಿಡಿದು ಓಡಾಡಬೇಕು!
ಇಲ್ಲದಿರೆ, ನಿಮ್ಮ ,ಸಂಗಡಿಗರ ಮೇಲೂ ಸುರಿವುದು ಶೀತ!
ಮಳೆಗಾಲ ಪ್ರಾರಂಭಿಸಲದು ಎಲ್ಲಿದ್ದರೂ ಬರುವುದು!
ಬಡವ -ಸಿರಿವಂತರ ಭೇದವಿರದೆ ಯಾರನ್ನೂ ತಡೆಯದು ಶೀತ!
ನವಿಲ ನರ್ತನ, ಬಿದ್ದ ಹಣ್ಣುಗಳ ತಿನ್ನಲು ಆಗದು!
ಭಯದ ಪರದೆಯ ಮೊದಲೆ ಇಳಿಸಿ ಬಿಡುವುದು ಶೀತ!
ಮಲೆನಾಡಲಿ ಪ್ರಾರಂಭ ಮರಿ ಜಿಗಣೆಯ ಕಾಟ!
ಸೊಳ್ಳೆ, ನೊಣಗಳಿಗೆ ರಕ್ತದಾನವ ಮಾಡಿದವನಿಗೂ ವಕ್ಕರಿಸುವುದು ಶೀತ!!
ನಿಮ್ಮ ಆರೋಗ್ಯದ ಬಗ್ಗೆ ಇರಲಿ ಸದಾ ಕಾಳಜಿಯು!
ಮಳೆಯು ತಲೆಯ ಮೇಲೆ ಬೀಳಲು ಪ್ರೇಮದಿ ಅಪ್ಪಿಕೊಳ್ಳುವುದು ಶೀತ!
@ಪ್ರೇಮ್@
13.06.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ