ಮನದಿಂಗಿತ
ಪ್ರೀತಿಯ ಕಡಲಲ್ಲಿ ಜೇನಿನ ಹೊಳೆಯಲ್ಲಿ,
ನೀ ಬಂದು ಮೀಯುತ್ತಾ ಖುಷಿ ಪಡೆಯೋ!
ನಗೆ ನೀರ ಚಿಲುಮೆಯಲಿ, ಬಾಳ ಬಂಡಿಯ ಗಾಲಿಯಲಿ
ನೀ ಬಂದು ಜೋಡಿಯಾಗಿ ಖುಷಿ ಪಡೆಯೋ!
ಮೌನವ ತಿಳಿಯುತಲಿ, ಮಾತಲಿ ಬೆರೆಯುತಲಿ,
ನೀ ಬಂದು ಒಂದಾಗಿ ಖುಷಿಪಡೆಯೋ...
ನನಗಾಗಿ ನೀನು, ನಿನಗಾಗಿ ನಾನು
ಎನುತ ಬಾಳಲಿ ಸಾಗಿ ಖುಷಿ ಪಡೆಯೋ..
ಮನದ ಮಂದಿರದಲ್ಲಿ ಅಭಿಷೇಕ ಪಡೆಯುತಿರು,
ಬಾಳ ಬೆಳಗುತ ಬಂದು ಖುಷಿ ಪಡೆಯೋ..
ಭವ್ಯ ಬದುಕಿನ ಕೀಲಿ ನಿನಗಾಗಿ ಇಟ್ಟಿರುವೆ,
ತಿಜೋರಿಯ ಬಿಚ್ಚುತ್ತಾ ಖುಷಿ ಪಡೆಯೋ..
ಓದು ಬರಹದ ಮುಂದೆ ಬೇರೆ ಕಾಯಕವಿಲ್ಲ!
ಮನವನೋದುತ್ತಾ ಅರ್ಥೈಸಿ ಖುಷಿ ಪಡೆಯೋ,
ನಾನು ನನ್ನದು ಎನದೆ, ನಾವು ನಮ್ಮದು ಎನುತ
ನಾವು ಜೊತೆಯಾಗೋ ಖುಷಿ ಪಡೆಯೋ..
@ಪ್ರೇಮ್-
13.06.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ