ಭಾನುವಾರ, ಜೂನ್ 30, 2019

1088. ಗುರುವರ್ಯ

ಗುರುವರ್ಯ

ಬೆಳೆಸಿ ನನ್ನ ಕಲಿಸಿ ಜೀವನ ಪಾಠ !
ಮೊದಲ ಗುರುವೆ ನಿನಗೆ ನಮನ,
ಮಾತು ಕಲಿಸಿ, ತಿದ್ದಿ ತೀಡಿ,
ಕಲ್ಲನೊಂದು ಮೂರ್ತಿ ಮಾಡಿ!

ಹಸಿವ ನೀಗಿ, ಕಷ್ಟ ಪಟ್ಟು
ಹಗಲು ಇರುಳು ದುಡಿತವಿಟ್ಟು!
ಸಂಸಾರ ಸಾಕಿ ಬಾಳಿ ಬದುಕಿ,
ಮನುಜನಾಗಿ ಮಾಡಿದ ತಂದೆ!

ಅಕ್ಷರವ ತಿದ್ದಿ ತೀಡಿ, ಕೋಲನಿಟ್ಟು ಹೆದರಿಸಿ!
ಪೆದ್ದು ಬುದ್ಧಿ ಸಹಿಸಿಕೊಂಡು
ಓದು ಬರಹ ಬರಲು ಖುಷಿಯ ಪಡುತ
ತನ್ನತನವ ಮಕ್ಕಳಿಗೆ ಬಿಟ್ಟು ಕೊಟ್ಟು ಬದುಕಿದ ಗುರುವೇ..

ಗೌರವಕ್ಕೆ ಯೋಗ್ಯರೆಲ್ಲ ನೀವು ನಮ್ಮ ಬಾಳಿಗೆ,
ಸೌಭಾಗ್ಯ ನಿಮ್ಮ ಪಡೆದ ನಮ್ಮ ಬದುಕಿದು!
ಬಾಗಿ ನಮಿಸಿ ನಿಮ್ಮ ಆಶೀರ್ವಾದ ಬೇಡುವೆವು,
ಸದಾ ನಮ್ಮ ಜೊತೆಗಿರಬೇಕೆಂದು ಕೋರುವೆವು..
@ಪ್ರೇಮ್@
28.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ