ಬರವೇನು?
ಬರಡಾಗದ ಬಾಳ ಬಸಿರಿನಲಿ
ಬಳ್ಳಿಯಂಥ ಬಯಕೆಗಳಿಗೆ ಬರವೇನು?
ಮನದಾಸೆ ನೂರಿಹುದು ಮರುಗದೆ ಮನೋಭಿಲಾಂಛೆಯ ಮಾಯಾಲೋಕದಲಿ ಮರೆಯದೆಯೇ..
ಕನಸು ಕಾಣುವ ಕಂದರವಿರದ, ಕೆಸರಾಗದ ಕದವು!
ಕಸದಲೂ ಕುಳಿತು ಕದಡದೆ ಕಟ್ಟುವುದು ಕನಸ ಮಹಲನು ಭರದಿ!
ಭವದ ಭಯದ ಬದುಕ ಭರವಸೆಯ ಬಲದಲಿ,
ಬೊಗಸೆ ತುಂಬ ಬಯಲಷ್ಟು ಬಯಕೆಗಳ ಬಳಗ!
ಬೇರು ಸಹಿತ ಬೆಳೆಸಿದ ಆಸೆಗಳ ಬಳ್ಳಿಯದು!
ಬೆಳಗುತಲಿರುವುದು ಕನಸ ಸಾಮ್ರಾಜ್ಯವ ಮನದೊಳಗೆ ಮಾತ್ರವೇ!
ಬರವಿರದ ಬಂಗಾರದಂತೆ ಭರತಖಂಡದೊಳು!
ನುಗ್ಗುವವು ನೂರಾರು ನಲಿವಿನಾಸೆಯ ನರ್ತನಗಳು!
ನೋವಲು, ನಲಿವಲೂ, ನಲುಗುವಾಗಲೂ, ನೆಮ್ಮದಿಯಲೂ
ನಮಗಾಗಿ,ನಮ್ಮವರಿಗಾಗಿ, ನಮ್ಮಾಸೆಗಳು ನಲಿವವು!!
ಏನಿರಲಿ,ಏನಿಲ್ಲದಿರಲಿ, ಯಾರಿರಲಿ ಯಾರೇ ಬರಲಿ!
ಏಕರೀತಿಯಲಲ್ಲ, ಅನೇಕ ರೀತಿಯಲಿ ಏರಿಬರುವ ಆಸೆಗಳಿಗೆ ಬರವೇನು?
@ಪ್ರೇಮ್@
03.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ