ನಿನ್ನ ಸೆರಗಿನಲಿ....
ನಿನ್ನುಸಿರ ಉಸಿರಾದ ನನಗೆ ನಿನ್ನ ಸೆರಗಿನಲಿ
ತಲೆತೂರಿಸಿ ಹುದುಗಿ ಅವಿತು ಕೂರುವಂತೆನಿಸೆ...
ಮನಬಿಚ್ಚಿ ನಿನ್ನೊಡನೆ ಮಾತಾಡಿ ಕುಣಿದಾಡಿ,
ಸೆರಗಿಡಿದು ಹಿಂದೆ-ಮುಂದೆ ಸುತ್ತುವಾಸೆ...
ನಲಿವಿನ ನವಿಲಂತೆ ನಲಿನಲಿದು ಬರುತಲಿ,
ನಾಟ್ಯವನು ಆಡುತಲಿ ನೋಟ ಬೀರುವ ಆಸೆ!
ನಂಬಿಕೆಯ ಅಂಗಣವದು ನಿನ್ನ ಮಡಿಲೊಲವು,
ವಿಂದ್ಯ ಪರ್ವತದಂತೆ ನೋವೆಂಬ ಮಳೆ ತಡೆದು...
ಹಲವು ಬಿಡಿ ಹೂವುಗಳು ಒಟ್ಟಾಗಿ ಗೊಂಚಲನು
ಕಟ್ಟಿದಂದದಿ ಬದುಕೆ ಒಂದೆಂಬ ಭಾವ ಬೇಕು!
ಮೊಸರ ಕಡೆಕಡೆದು ಬೆಣ್ಣೆ ಪಡೆವಂತೆ,
ನಿನ್ನೊಡಲ ಸೇರಿ ನಾ ಖುಷಿ ಪಡೆಯಬೇಕು!
ಶಾಂತಿ ನೆಮ್ಮದಿಯಾ ಬಾಳು ನಿನ್ನ ಬಳಿಯಲಿ ಇರಲು!
ಮಲಗಿ ನಿದ್ರಿಸೆ ಅಲ್ಲಿ, ಇಲ್ಲ ಯಾವುದೇ ನೋವು!
ಮಡಿಲ ಬಿಸಿ ನನ್ನ ಮುಖಮಂಚಕೆ ತಾಗಿ,
ಬೆಚ್ಚನೆಯ ಅಮರ ಸ್ಪರ್ಶವದು ನನ್ನಲ್ಲಿ..
ಅಮ್ಮಾ ಎಂಬ ಕರೆಯೇ ಲೋಕದಲಿ ಮಿಗಿಲಂತೆ!
ನಿನ್ನ ತೆಕ್ಕೆಯ ಒಲವು ಜಗವ ಮರೆಸುವುದಂತೆ!
ಮುದ್ದು ಮಾಡುತಲಿ ಕಂದಗೂಟವ ಕೊಟ್ಟು..
ನಸುನಗುತಲಿ ಸಾಕಿ ಪೊರೆವ ತಾಳ್ಮೆಯು ಮೇಲು..
ನಿನ್ನಾಸರೆಯ ಜೀವ ಎಂದೂ ಬರಡಾಗದು ಹೇಳು!
@ಪ್ರೇಮ್@
14.06.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ