ರೈತ
ಬೆವರು ಸುರಿಸಿ ದುಡಿವೆ ಜನರ ಹೊಟ್ಟೆ ತುಂಬಲೆಂದು..
ತವರು ಮನೆಯ ಹಾಗೆ ನನಗೆ ಗದ್ದೆ ತೋಟವೆಂದು..
ನಾನೆ ಸಾಕಿ ಬೆಳೆದ ಗಿಡವು ಫಸಲ ಕೊಡುವುದಂದ..
ಸಂತೆಯಲ್ಲಿ ಮಾರೆ ಅದನು ಕಾಸು ಮಾತ್ರ ಇಲ್ಲ ಕಂದ!//
ಬೆಳೆದ ಬೆಳೆಗೆ ಪಟ್ಟ ಕಷ್ಟ ನನಗೆ ಮಾತ್ರ ಗೊತ್ತು!
ಕಳೆದ ಕ್ಷಣ ನೆನಪಿಸುತ್ತ ಕುಳಿತರೇನು ಫಲವು?
ನಿನ್ನೆ ಕಳೆದು ನಾಳೆ ಬರಲು ಜೀವನವೇ ಬದಲು..
ಇಂದು ಸುಖವು, ನಾಳೆ ನೋವು ಇದು ಪ್ರಕೃತಿಯ ನಿಲುವು...//
ಕನಸು ಮನಸು ನೆನಪಿನಲ್ಲು ಕಾಯಕದ್ದೇ ಚಿಂತೆ!
ನಾಟಿ ಮಾಡಿ, ಗೊಬ್ರ ಹಾಕಿ ಬೀಜ ಬಿತ್ತಿ ಕಾದೆ!
ಮಳೆಯು ಇರದೆ ಬೆಳೆಯು ಸುಟ್ಟು ಹೋಯಿತಲ್ಲ ಹಾಗೆ..
ಧೈರ್ಯವನ್ನು ಕಳೆಯಲಿಲ್ಲ, ಪುನಃ ಪ್ರಯತ್ನವು ನನ್ನ ಕೆಲಸ.//
ಈಗ ಮಾತೆ ಮುನಿಯಲಿಲ್ಲ, ಬಂತು ಬೆಳೆಗೆ ಜೀವ ಕಳೆಯು!
ಕಷ್ಟ ದಿನವು ನೀಗಿ ಸುಖವು ಅರಸಿ ಬಂದಿತು!
ಸಾಲ ಮನ್ನವಾಯ್ತು! ಕುಟುಂಬ ನಕ್ಕಾಯ್ತು!//
ಆತ್ಮಹತ್ಯೆಯೆಂಬ ಪದವು ಸುಳಿಯಲಿಲ್ಲ,
ಬೇಗ ಬರಲಿ ಅಂತ ವಿಷವ ಸುರಿಯಲಿಲ್ಲ!
ಭೂಮಿ ತಾಯಿ ನನ್ನ ಮಾತೆ, ಉಳಿಸಬೇಕು ಹಾಗೆ!
ಮುಂದಿನ ಮನೆ ಮಕ್ಕಳೆಲ್ಲ ಬದುಕುತಿರಲಿ ಸಂತಸದಿ ಎಲ್ಲರೊಂದಾಗಿ//
@ಪ್ರೇಮ್@
27.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ