ಹೀಗೆ ಸುಮ್ಮನೆ
ಹಿ-ನಾನು ನೀನು ಜೋಡ್ ಅಲ್ಲವೇನು?
ಶಿ-ಅದಕೆ ಈಗ ಮಾತದೆಲ್ಲ ಏನು?
ಹಿ- ಬಾರೆ ಚಿನ್ನ! ಹರಟೆ ಹೊಡೆಯೋ ಸಮಯ!
ಶಿ- ಹೋಗೋ ರನ್ನ, ಕೆಲಸವಿಹುದು ಬಹಳ!
ಹಿ-ನನ್ನ ಮುದ್ದು, ನನ್ನ ಸಂಗಾತಿ ನೀನೇ!ಮುತ್ತಿನೋಲೆ ನಿನಗೆ ಬೇಕು ತಾನೇ?
ಶಿ-ಬೇರಕೆಂದುದ ಕೊಡಿಸುವೆಯಾ ನೀನು! ಅಮ್ಮನಿಗೆ ಕಳಿಸಬೇಡವೇನು?
ಹಿ- ನನ್ನ ಮುದ್ದು, ನೀನೆ ಅಲ್ಲವೇನೆ?ನನ್ನ ದುಡಿತ ನಿನಗೆ ಸೇವೆ ತಾನೇ?
ಶಿ-ಆದರೇನು ಬಯಸಿದ ಪಡೆಯಲಾರೆ, ನಿನ್ನಲೆಂದೂ ಸ್ವರ್ಗ ಕಾಣಲಾರೆ!!!
ಹಿ-ಸಿರಿತನವೇ ಸ್ವರ್ಗವಲ್ಲ ನನ್ನುಸಿರೇ ..ಪ್ರೀತಿಯಿಂದ ಬಾಳೋಣ ಮನವೇ..
ಶಿ-ನನಗೂ ಬೇಕು ನಿನ್ನ ಪ್ರೀತಿ..ನನ್ನ ಪ್ರೀತಿ ನಿನಗೇ ಮೀಸಲಾತಿ..
ಹಿ-ಹರಟೆ ಸಾಕು..ಬಾರೆ ನಲ್ಲೆ..ತಿನ್ನಲೆನಗೆ ತಿಂಡಿ ಬೇಕು..
ಶಿ-ಕಾಫಿ ತಿಂಡಿ ಮಾಡಿ ತರುವೆ..ನಿನ್ನ ಜೊತೆಗೆ ಸದಾ ಇರುವೆ..
@ಪ್ರೇಮ್@
08.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ