ಸ್ನೇಹ ಸಮ್ಮಿಲನ
ಕಲೆಯಲುಂಟು ಕೂಡಿ ಜತೆಯಲಿ
ನಕ್ಕು ನಗುವ ಚಿಕ್ಕ ಬಾಳಲಿ...
ಸ್ನೇಹದ ಸಮ್ಮಿಲನ ಈ ದಿನದಲಿ
ಕವಿಮನಗಳ ಹೃದಯದೊಡಲಲಿ..
ಮುಖ ಪರಿಚಯ ಹೊಸದು
ಮನ ಪರಿಚಯ ಹಳೆಯದು!
ಭಾವನೆಗಳ ಜೇನುಗೂಡ ಕಹಳೆ
ಚಂದಿರನೆಂಬ ರಾಣಿ ಜೇನ ಪಕಳೆ
ಸ್ನೇಹ ಸಂಗಮದ ಅಡಿಯಲಿ
ಕವಿ ಸ್ನೇಹಿತರ ಮನದ ನುಡಿ ಮುತ್ತುಗಳೆ...
ಭವ್ಯ ಬಾಳ ಹಾರೈಕೆಗಳೊಡನೆ
ಸಮಾಜ ತಿದ್ದುವ ಕಾರ್ಯದೊಡನೆ
ಕನ್ನಡಕಾಗಿ ಕೈಯನೆತ್ತಿ ನಡೆಯುತ
ಸಮಯವ ಸಾಹಿತ್ಯ ಸೇವೆಗಾಗಿ ಮೀಸಲಿಡುತ....
ನಾವೆಲ್ಲ ಒಂದೆ ಎನುತ ಸಾಗೋಣ,
ಪ್ರೀತಿ, ಸ್ನೇಹ ಹಂಚೋಣ!
ಗೆಳೆತನವ ಮರೆಯದಿರೋಣ,
ನಮ್ಮ ಹೃದಯ, ಭಾವನೆಗಳ ಸ್ವಚ್ಛವಾಗಿರಿಸೋಣ!
@ಪ್ರೇಮ್@
09.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ