1.ಮನೆಮಂದಿ
ಮಗಳು ಕನ್ನಡಿಯೆಂದು ನಿಂತವಳು
ಹೊರಗೆ ಬರಲೊಲ್ಲಳು..
ಮಡದಿ ಟಿವಿಯೆದುರು ಕುಳಿತವಳು
ಊಟ ಬಡಿಸಲೊಲ್ಲಳು!
ಗಂಡ ಮೊಬೈಲ್ ಹಿಡಿದುಕೊಂಡವನು
ಸೋಫಾದಿಂದ ಏಳಲೊಲ್ಲನು!
2. ಹೊರಡುವ ಬಗೆ
ಮಗಳು ಶರವೇಗದಿ
ಕಾಲೇಜಿಗೆ ಹೊರಡುತಲಿದ್ದಳು!
ಪಕ್ಕದ ಮನೆ ಮಗ ವೇಗದಿ
ಅವಳ ಕಾಲೇಜಿನ ಕಡೆಗೆ
ಹೊರಡಲನುವಾಗುತ್ತಿದ್ದನು!
@ಪ್ರೇಮ್@
29.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ