ಭಾನುವಾರ, ಆಗಸ್ಟ್ 4, 2019

1134. ನ್ಯಾನೋ ಕತೆ-ವ್ಯತ್ಯಾಸ

ವ್ಯತ್ಯಾಸ

ಮನೆಯೆದುರು ತಲೆಯ ಮೇಲೆ ಬಟ್ಟೆ ಹೊತ್ತು  ಬಂದ ಬಿಹಾರಿಯೋರ್ವನ ಬಳಿ ಸೀರೆಯ ಬೆಲೆ ಕೇಳಿದರು ರತ್ನಮ್ಮ. ಐನೂರು ರೂಪಾಯಿಗಳೆಂದ. "ನೋಡು ಇನ್ನೂರು ರೂಪಾಯಿಗಳ ಕೊಡುವೆ, ಈ ಕ್ವಾಲಿಟಿಗೆ ಅದೇ ಜಾಸ್ತಿ, ಕೊಟ್ಟು ಹೋಗು" ಎಂದು ಜಗಳಕ್ಕೇ ನಿಂತರು! ಇವರ ಬಾಯಿಗೆ ಎದುರಾಡಲಾಗದೆಯೂ, ಹೊತ್ತು, ಹೊತ್ತು ಸುಸ್ತಾದ ಕಾರಣವೂ 'ಇನ್ನೊಂದು ಕಡೆ ದೇವರು ನಷ್ಟ ತುಂಬಿ ಕೊಟ್ಟಾನು' ಅಂದುಕೊಂಡು ಕೊಟ್ಟು ಹೋದ.
     ಮರು ದಿನ ಸಂಜೆ ಎ.ಸಿ. ಕೋಣೆಯೊಳಗೆ ತಾನು ಕುಳಿತು ಹೊಲಿದ, ಬೇಗ ಹೊಲಿಯಲು ಜಾಸ್ತಿ ಹಣ ಕೇಳುವ ಟೈಲರ್ ನ ಬಳಿ ಅದೇ ಸೀರೆಯ ರವಿಕೆಯನ್ನು ಮಾತಿಲ್ಲದೆ ಆರುನೂರು ರೂಪಾಯಿ ಕೊಟ್ಟು ಅಲ್ಲಿ ಹೋಗಿ ಕೊಂಡು ತಂದರು ರತ್ನಕ್ಕ!!!
@ಪ್ರೇಮ್@
27.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ