ಭಾನುವಾರ, ಆಗಸ್ಟ್ 4, 2019

1157. ಬದುಕಗಾಲಿ

ಬದುಕ ಗಾಲಿ

ಮೋಡಗಳಲಿ ತೇಲುತ ಜಾರಿ ಜಾರಿ
ತಂಗಾಳಿಯಲಿ ಈಜುತ ಹಾರಿ ಹಾರಿ.//
ಮಂಜಿನಲಿ ಹೋಗುತ ಬಾರಿ ಬಾರಿ..
ಹುಡುಕುತಲಿ  ಸಾಗುತ ದಾರಿ ದಾರಿ.....//

ಹಾರುವ ಜಾರುವ ಬಾರಿಯು ಹುಡುಕುವ!
ಬದುಕಿನ ಮೂರು ದಿನಗಳ ಯಾತ್ರೆಯ,
ಮನುಜನು ಸಾಗಿಸ ಬೇಕದು ಸರಿಯಲಿ!
ಬೆಳಗಿಸ ಬೇಕು ದಿನಗಳ ಜೊತೆಯಲಿ.//

ಮಾತಿನ  ಎದುರು  ಮೌನಕೆ ಬೆಲೆಯು!
ಕನಸನು ಕಟ್ಟಿದ ಮೋಹಕ ಸೆಳೆಯು,
ನಿಜ ಸುಳ್ಳುಗಳ ಮಾತಿನ ಮಿಳಿತವು!
ನನಗೆ ನೀನು ಎನುವ ಸಂಬಂಧವು!//

ಮೌಲ್ಯದ ಬಾಯಿಗೆ ಬೆಲೆಯು ಇಹುದು,
ಕೌಶಲ್ಯದ ಕೈಗೆ ತಾಳ್ಮೆಯು ಬರುವುದು!
ಸೋಲು ಗೆಲುವಿನ ಬದುಕ ಬಂಡಿಗೆ
ನಾವಿಕ ನಾವಾಗಿ ಉರುಳಿಸಲಿಹುದು!//
@ಪ್ರೇಮ್@
18.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ