ಗುರುವಾರ, ಆಗಸ್ಟ್ 15, 2019

1170. ಕೇಸರಿ ಕಪ್ಪಿನ ನಡುವೆ

ಕೇಸರಿ ಕಪ್ಪಿನ ನಡುವೆ

ಬಾಳದು ನಮ್ಮದು ಬಣ್ಣದ ನಡುವೆ
ಹೇಳಲಿ ಏನು ಸೂರ್ಯನೆ ಒಡವೆ..
ಜಗವದು ಸುತ್ತಿ ದಿನ ರಾತ್ರಿ ಬರಲು
ಸಮುದ್ರಕೆ ಬಿದ್ದು ನಿದ್ದೆಯ ಮಾಡಲು!

ಕೇಸರಿ ಕಪ್ಪಿನ ಬಣ್ಣದ ಜೊತೆಗೆ
ಜೀವನ ಯಾತ್ರೆಯು ಸಾಗುತಿದೆ!
ಕೈಯಲಿ ಬಂಕಿಯ ಉಗುಳುವ ಬಾಳಿದೆ!
ಕೆಂಡವು ಮಡಿಲಿನ ಸೆರಗಲಿ ಕಟ್ಟಿದೆ!

ನೀರದು ನಡುವಲಿ ಬಾಳಿನ ಉರಿಯಲಿ
ಹೇಳುವುದೇನು ಕುಡಿಯಲು ಆಗದು!
ಅಲೆಗಳ ಆರ್ಭಟ ನೋಡುತ ಸಾಗು,
ದೇವನ ಆಟಕೆ ತಲೆಯನು ಬಾಗು!

ಜೀವನದಾಟದಿ ಸಾಗರ ದಾಟು,
ಹೊಳೆಯುವ ರವಿಯ ಬೆಳಕನು ಮೀಟು,
ಬಾಗುತ ಬೆನ್ನನು ಬಾಳುವೆ ನೋಡು,
ಪುಣ್ಯ ಹೃದಯಗಳು ನೆಲೆಸಿಹ ನಾಡು!
@ಪ್ರೇಮ್@
08.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ