ಭಾನುವಾರ, ಆಗಸ್ಟ್ 4, 2019

1143. ಕೇಳೇ ನನ್ ಹಾಡ

ಕೇಳೇ ನನ್ ಹಾಡ..

ಸಂಗೀತ್ವಂತೂ ಬರೋದಿಲ್ಲ, ರಾಗ ಗೀಗ ಕಲ್ತೇ ಇಲ್ಲ
ಲಯ ತಾಳ ತಿಳ್ಕೊಂಡೇ ಇಲ್ಲ..ನಾ..
ಆದ್ರೂನೂ  ನಿಂಗಾಗೇ ಪದ್ಯ ಹಾಡ್ತೀನೇ ರಂಗಿ
ಕೇಳೇ ನೀ ನನ್ನ ಹಾಡನ್ನ..ರಂಗೀ..

ಮುಸುರೆ ತಿಕ್ಕಿ ಸಾಕ್ಯಾಳ್ ತಾಯಿ!
ನಂಗ್ ನಾಕ್ ಅಕ್ಷರ ಕಲಿಸಿದ್ದೆ ಹೆಚ್ಚು ಅವ್ಳು!
ನಾ ಸಂಗೀತ ಹೆಂಗೇ ಕಲಿಬೇಕೇ ರಂಗಿ?
ನನ್ ರಾಗ್ದಾಗೇ ಹಾಡ್ತೀನಿ ನೋಡೇ ನಿಂಗೇ..//

ನಿನ್ ಪ್ರೀತಿಗ್ ರಾಗ ಬೇಕೇ
ಕಣ್ಣೋಟಕ್ ತಾಳ ಬೇಕೇ..
ಹಾಡಲ್ಲೇ ಮನವ ಗೆಲ್ತೀನೀ ನಿನ್ನ
ನೋಡ್ತಾನೇ ಲೋಕ ಮರೀತೀನೀ.. ರಂಗೀ..//

ಹಾಲ್ನಲ್ಲಿ ಜೇನಾ ಹಾಕಿ
ತುಪ್ದಲ್ಲಿ ಸಕ್ರೆ ಹಾಕ್ದಂಗ್ ಹಾಡಾ ಕಟ್ತೀನೀ..ಈ..ಈ..
ನಾ ನಿನ್ ಕುತ್ಗೆಗ್ ತಾಳೀ ಕಟ್ತೀನೀ..
ನಿನ್ನ ಮಹಾರಾಣಿಯಂಗೆ ಸಾಕ್ತೀನೀ...ರಂಗೀ..//

ಚಳಿಯಿರ್ಲೀ ಮಳೆಯೇ ಬರ್ಲೀ..
ನಂಗ್ ನೀನು, ನಿಂಗೇ ನಾನು ಅಂತಾ ಬಾಳೋಣಾ..ನಾವೂನೂ..
ತೋಳಲ್ಲಿ ಬಳಸಿ ನಿನ್ನ , ಮುದ್ದಾಗಿ ನೋಡಿ ಕೊಳ್ತಾ..
ಬಯಸಿದ ಪ್ರೀತಿ ಕೊಡ್ತೀನೇ ರಂಗೀ..ಜತೆಯಾಗಿ ನಿತ್ಯ ಇರ್ತೀನೇ..//
@ಪ್ರೇಮ್@
17.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ