ಹರಿಸ್ಮರಣೆ
ರಾಗವಾಗಿ ಹಾಡಲಾರೆ, ತಾಳ ಲಯವ ತಿಳಿಯಲಾರೆ
ಭಕ್ತಿಯಿಂದ ಹಾಡಬಲ್ಲೆ ನಿನ್ನ ನಾಮವ ಹರಿಯೇ..
ಪಕ್ಕ ವಾದ್ಯ ನುಡಿಸಲಾರೆ, ಶೃತಿಯ ಜಾಡು ಹಿಡಿಯಲಾರೆ,
ಹೃದಯ ಗುಡಿಯ ಅರ್ಪಿಸುವೆ ನನ್ನ ದೇವನೇ..
ಮಾತಿನಲ್ಲಿ ಕರೆಯಲಾರೆ, ಅತ್ತು ಕರೆದು ಕೇಳಲಾರೆ
ಮೌನದಲ್ಲೆ ಬೇಡಿಕೊಳುವೆ ಲಕ್ಷ್ಮಿ ರಮಣನೇ..
ದಾನ ಧರ್ಮ ನೀಡಲಾರೆ, ಗುಡಿ ಗೋಪುರ ಕಟ್ಟಲಾರೆ
ಮನದಿ ನಿನ್ನ ನೆಲೆಗೊಳಿಸಿರುವೆ ವೈಕುಂಠವಾಸನೇ...
ನಾದ ವೇದ ಹೇಳಲಾರೆ, ಸಹಸ್ರಾರ್ಚನೆ ಸಲ್ಲಿಸಲಾರೆ
ಒಂದೇ ಭಾವದಿ ಬೇಡುವೆನು ಭಕ್ತರ ಪ್ರಿಯನೇ..
ಧನ ಧಾನ್ಯವ ದಾನ ಮಾಡಲಾರೆ, ಊರೂರ ಅಲೆಯಲಾರೆ
ಶ್ರದ್ಧೆಯಿಂದ ಕಾರ್ಯ ಮಾಡುವೆ ನಾರಾಯಣನೇ..
ಹರಸು ನನ್ನ ಎನುತ ಬಂದು ದೀನನಾಗಿ ಮೊರೆಯಿಡಲಾರೆ,
ಭಕ್ತಿಯಿಂದ ಬೇಡುವೆನು ಶಕ್ತಿ ಕೊಡು ಕೇಶವನೇ..
@ಪ್ರೇಮ್@
25.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ