ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-55
ಮಳೆ ಇಲ್ಲವೆಂದು ಕಪ್ಪೆ, ಕತ್ತೆಗೆ ಮದುವೆ , ಮೋಡ ಬಿತ್ತನೆ ಮಾಡಿದ,ಮರ ಕಡಿದು ಕಾಂಕ್ರೀಟ್ ಕಾಡಿನ ಸೃಷ್ಟಿ ಮಾಡಿ ಐಶಾರಾಮಿ ಜೀವನ ನಡೆಸ ಹೊರಟ ಮಾನವನಿಗೆ ಪ್ರಕೃತಿ ತಾನೇನು ಎಂದು ತೋರಿಸುತಲಿದೆ. ತನ್ನ ಶಕ್ತಿಯ ರುದ್ರ ಪ್ರದರ್ಶನ ಮಾಡಿ, ತನ್ನ ಗುರಿ ಸಾಧಿಸಿ ಬಿಡುವ ಚಪಲತೆಯ ಕರಾಳ ಹಸ್ತದ ರುಚಿ ತೋರಿಸಿ, ಜಾತಿ ಮತ ಧರ್ಮಗಳ ಬೇಧವಿಲ್ಲದೆ, ಮಾನವನು ಹುಟ್ಟಿನಲ್ಲೂ, ಸಾವಿನಲ್ಲೂ, ಕಷ್ಟದಲ್ಲೂ ಒಂದೇ ಎಂದು ತಾನೇ ತೋರಿಸಿಕೊಟ್ಟಿತು!
ಮನವೊಂದೇ. ಯಾವ ಜಾತಿ, ಭಾಷೆ, ಧರ್ಮದವರೂ ಪ್ರೀತಿಗೆ, ಒಳ್ಳೆಯತನಕ್ಕೆ ಬಾಗುತ್ತಾರೆ, ಪ್ರಾಣಿಗಳೂ ಬಾಗುತ್ತವೆ ಅಲ್ಲವೇ? ಜೀವಿಗಳಿಗೂ ನಿರ್ಜೀವಿಗಳಿಗೂ ಇರುವ ಲಕ್ಷಣ ಒಂದೇ! ಜೊತೆಗೆ ಎಪ್ಪತ್ತ ಮೂರನೇ ಸ್ವಾತಂತ್ರ್ಯೋತ್ಸವದ ಸಡಗರ! ಹಲವಾರು ಮಂದಿಯ ಮನೆ ಮಠಗಳು, ಸಾಕುಪ್ರಾಣಿಗಳು ನೀರುಪಾಲಾಗಿ, ಬಿತ್ತಿ ಬೆಳೆದು ಕಷ್ಟಪಟ್ಟ ಬೆಳೆ ನೀರಲ್ಲಿ ಮುಳುಗಿದಾಗ ಬದುಕೊಂದು ಉಳಿದರೆ ಸಾಕೆನುತ ಗಂಜಿ ಕೇಂದ್ರದಲ್ಲಿ ದಿನ ಕಳೆಯುವವರ ಕಷ್ಟಗಳ ಮುಂದೆ ನಮಾಮದೇನು ಅಲ್ಲವೇ?
ವರುಣನಾರ್ಭಟ ನಿಲ್ಲಲಿ, ಸರ್ವ ಜನಕೂ ಶಾಂತಿಯಿಂದ ಬದುಕುವಂತಾಗಲಿ, ಪರಿಹಾರ ಕಾರ್ಯ ಎಲ್ಲರಿಗೂ ಸಿಗುವಂತಾಗಲಿ. ಎಲ್ಲರಿಗೂ ದೇವರಲ್ಲಿ ಬೇಡಿಕೊಳ್ಳೋಣ. ನಮಗೆ ಸಾಧ್ಯವಾದಷ್ಟು ಸಹಾಯ ಮಾಡೋಣ. ನೀವೇನಂತೀರಿ?
@ಪ್ರೇಮ್@
14.08.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ