ನ್ಯಾನೋ ಕತೆ
ನಾನೇ ಹತ್ತು ವರುಷಗಳ ಹಿಂದೆ ಪಟ್ಟದ ಕಲ್ಲಿನ ದೇವಾಲಯದ ಪಕ್ಕದ ದೊಡ್ಡ ಬಂಡೆಯ ಮೇಲೆ ಹತ್ತಿ ಕಲ್ಲಲ್ಲೇ ಹೃದಯದ ಚಿಹ್ನೆಯನ್ನು ಕೆತ್ತಿ ಅದರೊಳಗೆ ಬಿಪಿ ಎಂಬ ಆಂಗ್ಲ ಅಕ್ಷರಗಳು ನಗುತ್ತಿದ್ದವು!
ಹತ್ತು ವರುಷಗಳ ಹಿಂದೆ ಮದುವೆಯಾಗುವೆನೆಂದು ಕನಸು ಕಂಡಿದ್ದ ಪ್ರಿಯಾ ಜೊತೆ ಬಂದು, ಅಮರ ಪ್ರೇಮಿಗಳಂದುಕೊಂಡು ಕೆತ್ತಿದ್ದ ಭಾನು. ತದನಂತರ ಅವಳು ಕೈಕೊಟ್ಟು ಸಿರಿವಂತನ ಮದುವೆಯಾದ ಬಳಿಕ ಅತ್ತೆ ಮಗಳ ಕೈ ಹಿಡಿದು ಆಗಲೇ ಎಂಟು ವರುಷಗಳಾಗಿತ್ತು! ಮಕ್ಕಳಿಗೆ ತೋರಿಸಲೆಂದು ಸಂಸಾರ ಸಮೇತ ಮತ್ತೆ ಪಟ್ಟದಕಲ್ಲಿಗೆ ಬಂದಿದ್ದ, ಹೆಂಡತಿಯೊಡನೆ!
@ಪ್ರೇಮ್@
28.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ