ಹೇಳುವುದು ಒಂದು...
"ಮಾನವತೆ ಮನುಜನಿಗೆ ತುಂಬಾ ಮುಖ್ಯ. ಮಾನವರು ಮಾನವರಂತೆ, ಮಾನವರಾಗಿ ಬಾಳಿ. ದ್ವೇಷ ಅಸೂಯೆ ಸಲ್ಲದು, ಶಾಂತಿಯ ಬಾಳು ಬಾಳಲು ನೆಮ್ಮದಿ ಮುಖ್ಯ. ನೆಮ್ಮದಿಯಾಗಿರಲು ಉತ್ತಮ ಗುಣ ಬೇಕು. ಅದು ನಿಮ್ಮಲ್ಲಿರಬೇಕು. ಪರರ ವಸ್ತು ಬಳಸದಿರಿ..." ಹೀಗೆ ದೊಡ್ಡದಾಗಿ ಮಾನವತೆಯ ಬಗ್ಗೆ ಭಾಷಣ ಬಿಗಿದ ರಾಯರು ರಾತ್ರಿ ಕಂಠ ಪೂರ್ತಿ ಕುಡಿದು, ತನ್ನ ವೈರಿಯನ್ನೆತ್ತಲು ಒಂದಷ್ಟು ಸುಪಾರಿ ಸುರಿದು, ಹೆಂಡತಿಗೆ ಕೆಲಸವುಂಟೆಂದು ಹೇಳಿ, ತನ್ನ ಪ್ರೇಯಸಿಯ ಕರೆದು ಅವಳೊಂದಿಗೆ ರಾತ್ರಿಯ ಕಡೆಯ ಪ್ರದರ್ಶನ ನೋಡಲು ಥಿಯೇಟರ್ ಗೆ ತೆರಳಿದರು.
@ಪ್ರೇಮ್@
25.07.201
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ