ನೆನಪಿಸುವೆ
ಮಣ್ಣ ಮುದ್ದೆಯಂತಿದ್ದ ಮಗುವನು ಬೆಳೆಸಿ,
ತಿದ್ದಿ ತೀಡಿ ಮಾನವನಾಗಿಸಿದ,
ಊಟ ತಿಂಡಿಯ ಸಮಯಕೆ ನೀಡಿದ,
ಮಾತೆಯ ತಾಳ್ಮೆಯ ಸ್ಮರಿಸುವೆ ಜಗದಿ..
ಅವಿದ್ಯಾವಂತಳಾಗಿ ಶಾಲೆಗೆ ಹೋದಾಗ
ಕೈ ಹಿಡಿದು ಬರೆಯಲು, ಓದಲು ಕಲಿಸಿ,
ಬುದ್ಧಿಯ ಬೆಳಗಿಸಿದ, ದಾರಿಯ ತೋರಿದ
ಗುರುವಿನ ಸ್ಮರಣೆಯ ಮಾಡುವೆ ನಿತ್ಯ!
ಭೂಮಿಯ ಮೇಲೆ ನಮ್ಮನು ತಂದು,
ಬೇಕಾದ ವರಗಳನೆಲ್ಲವ ನೀಡಿ,
ಕಷ್ಟ ಸುಖಗಳ ಪರಿಚಯ ಮಾಡಿಸಿ,
ಉತ್ತಮ ಸಂಬಂಧಗಳ ತೋರಿ ಸಲಹುತಿಹ,
ದೇವನ ಸ್ಮರಣೆಯ ನಿತ್ಯ ಮಾಡುವೆ!
ತಿನ್ನಲು ಉಣ್ಣಲು ಬಟ್ಟೆಯ ತೊಡಲು,
ಆಧಾರವಾಗಿಹ ಕಾಯಕ ಮಿಗಿಲು,
ಕಾಯಕ ಮಾಡಲು ಶಕ್ತಿಯ ಕೊಡುವ
ನೀರು,ಆಹಾರವ ಒದಗಿಸಿ ಕೊಡುವ
ಪ್ರಕೃತಿ ಮಾತೆಯ ಸ್ಮರಣೆಯ ಮಾಡುವೆ..
ನೆಮ್ಮದಿಯಿಂದಲಿ ಬಾಳುವೆ ಮಾಡುತ,
ಶಾಂತಿಯ ಜೀವನ ನಡೆಸುತ ಬದುಕಲು,
ದಾರಿ ದೀಪವಾಗಿ ದೇಶದ ರಕ್ಷಣೆ
ಮಾಡುತ ಮಂಜಲಿ ನಡುಗುತಲಿರುವ ಯೋಧರ ಸ್ಮರಣೆಯ ಮಾಡುವೆ ನಿತ್ಯವೂ..
@ಪ್ರೇಮ್@
11.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ