ತಪ್ಪಿಗೆ ಶಿಕ್ಷೆ
"ನಾನು ನನ್ನ ಹೆಂಡತಿಗೆ ಕುಡಿದು ಬಂದು ಹಾಗೆ ಹೊಡೆದಾಡಬಾರದಿತ್ತು ಕಣೋ"ಅವನೆಂದ. "ನನಗೂ ಹಾಗನ್ನಿಸ್ತಿದೆ ಕಣೋ. ಆಸ್ತಿಗಾಗಿ ಅಣ್ಣನ ಹೊರ ಹಾಕಿ ಅಪ್ಪನ ಕತ್ತು ಹಿಚುಕಿ ಸಾಯಿಸಿದ ಕ್ರೂರಿ ಪಾಪಿ ನಾನು!" ಇವನೆಂದ! "ಈಗ ಎಣ್ಣೆಯ ಬಾಣಲಿ ಬರಲಿದೆಯಂತೆ ನಮಗಾಗಿ" ಇಬ್ಬರೆಂದರು! "ಮಾಡಿದ್ದುಣ್ಣೋ ಮಹಾರಾಯ! ಅನುಭವಿಸಲೇ ಬೇಕು, ವಿಧಿಯಿಲ್ಲ" ಅವನೆಂದ. ಗೋರಿಯೊಳಗೆ ರಂಗ ಮತ್ತು ನಿಂಗ ಮಾತನಾಡಿಕೊಳ್ಳುತ್ತಿದ್ದರು!
@ಪ್ರೇಮ್@
23.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ