ನ್ಯಾನೋ ಕತೆ
ಬದಲಾಯಿತು ಬದುಕು..
ಬೇಗ ಕೆಲಸ ಸಿಗಬೇಕಾದರೆ ಯಾವ ಕೋರ್ಸ್ ಮಾಡಿದರೆ ಉತ್ತಮವೆಂದು ಸಂಶೋಧನೆ ಮಾಡುವಾಗ ವನಿತಾಗೆ ಸಿಕ್ಕಿದ್ದು ನರ್ಸಿಂಗ್ ಕೋರ್ಸ್!!
ಪಿಯುಸಿ ಆದ ಬಳಿಕ ಎರಡು ವರುಷ ಕಲಿತರಾಯ್ತು, ಜೀವನ ಫಿಕ್ಸ್! ಗೆಳತಿಯರೆಲ್ಲ ನೀಡಿದ ಸಲಹೆ!
ರಕ್ತದ ಬಣ್ಣ, ರಕ್ತ ಕಂಡರೇನೇ ತಲೆತಿರುಗಿ ತಾನೇ ಬೀಳುವ ವನಿತಾ ಶುಶ್ರೂಷಕಿಯಾದರೆ ಮತ್ತೊಂದು ನರ್ಸ್ ಇವಳಿಗಾಗಿ ಬೇಕಾಗಬಹುದೆಂಬ ಅನುಮಾನದಿಂದ ಆ ಓದಿನ ಬಗ್ಗೆ ಆಸಕ್ತಿ ತೋರದೆ ಕಂಪ್ಯೂಟರ್ ಡಿಪ್ಲೊಮೋ ಮಾಡಿದಳು! ಕಂಪ್ಯೂಟರ್ ಗಳ ಮಾರಾಟ ಹಾಗೂ ಸರ್ವಿಸ್ ಮಾಡುವ ಆ ಊರಿನ ಪ್ರಮುಖರಲ್ಲಿ ಅವಳೂ ಒಬ್ಬಳಾಗಿರುವಳು ಈಗ!
ಬದುಕು ಬದಲಾಯಿತು!
@ಪ್ರೇಮ್,@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ