ಭಾನುವಾರ, ಆಗಸ್ಟ್ 4, 2019

1142. ಭಾವಗೀತೆ-ಬಾನಿನಾಟ

ಬಾನಿನಾಟ..

ಬೆಳ್ ಬೆಳ್ದಿಂಗಳು ಹಾಲನು ಚೆಲ್ಲಿದೆ
ಬಾನಿನ ನೆಲದೊಳಗೆ..
ಚಂ ಚಂ ಚಂದಿರ ಓಡುತ ಬಂದನು
ತನ್ನಯ ಕಛೇರಿಯೊಳಗೆ...

ರವಿ ಕಿರಣಗಳ ಚೆಲ್ಲುತ ನಿಂತನು
ಮೈ ಕನ್ನಡಿಯೊಳಗೆ..
ಧರಣಿ ದೇವಿಯು ಬೆಳ್ಳಗಾದಳು
ಹಾಲಿನ ನೊರೆಯೊಳಗೆ..

ತಂಪಿನ ಇರುಳಲಿ ತಾರೆಗಳೊಡನೆ
ಮೆರೆವುದು ಹುಣ್ಣಿಮೆ ಕೂಟ!
ನೋಡುಗರೆದೆಗೆ ಸುಖದ ಅನುಭವವು
ಸೋಮನ ಬಾನಿನ ಆಟ...

ತಿರೆಗೆ ಯಾವುದರ ಪರಿವೆಯಿಲ್ಲದೆಯೇ
ಮಲಗಿಹಳು ತಣ್ಣಗೆ ತಾನು!
ವರುಣನೂ ಸುರಿದನು ನೆನೆಸುತಲಿ
ಬಾಗಿತು ಮರದೆಲೆ ತಾನು!

ರವಿ ಚಂದಿರ ಧರೆ ತಾರೆಗಳ
ಆಟವು ಸುಮಧುರ ತಾನೇ?
ಹಗಲು ರಾತ್ರಿಯದು ಬಾಳ ಹಾದಿಯಲಿ
ಸರ್ವರಿಗುಂಟು ಜಾಣೆ...
@ಪ್ರೇಮ್@
18.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ