ಗುರುವಾರ, ಆಗಸ್ಟ್ 15, 2019

1167. ಜಾತಿ ಅಳಿಯಲಿ

ಜಾತಿ ಅಳಿಯಲಿ..

ನಾವು ಬಂದೇವ ಇಬ್ಬರೂ ಸೇರೋದಕ್ಕ
ಸೇರಿ ಒಂದಾಗಿ ಇಲ್ಲಿ ಬಾಳೋದಕ್ಕ...
ಪ್ರಪಂಚವೆಂಬುದು ಮತ್ಸರದ ಹಿರಿ ಜಾಗ...
ಅಲ್ಲಿ ನಮಗಿಲ್ಲ ತಿರುಗೋ ಯೋಗ..

ಹಗಲು ಹೊತ್ತಿನಲಿ ಮಾತಾಡಲು ಆಗದು.
ರಾತ್ರಿ ಬರದೆ ನಿನ್ನ ಕಾಣಲು ಆಗದು!
ಚಂದಿರ ನಮ್ಮನು ನೋಡಿ ನಕ್ಕಾನು..
ನಮಗಾಗೆ ಬೆಳ್ದಿಂಗ್ಳ ಹರಡಿ ಬಿಟ್ಟಾನು..

ಜಗದಿ ನಿಜ ಪ್ರೀತಿಗೆ ಬೆಲೆ ಕಟ್ಟೋರಿಲ್ಲ
ಜನರ ಬಾಯಲಿ ಸಿಗದಿರೋ ಜನರಿಲ್ಲ!
ಬದುಕಿಗೆ ಒಂದು ಜೋಡಿಯು ಸಹಜ..
ಅದರ ಹುಡುಕಾಟಕೂ ಇಡುವರು ಕೊಳ್ಳಿಯ ...

ಜಾತಿ ಪದ್ಧತಿ ಸಾಯಲೇ ಬೇಕು..
ಮನುಜ ಮತವದು ಬೆಳೆಯಲೇ ಬೇಕು..
ಮೇಲು ಕೀಳಿನ ರಂಪಾಟದಲಿ
ಸತ್ಯ ಪ್ರೀತಿಯೇ ನಿತ್ಯ ಬದುಕಲಿ...

@ಪ್ರೇಮ್@
06.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ