ಕವ್ನ ಕಣೋ ನಾನು..
ಬೊಚ್ ಬಾಯ್ಯವಳೆ ಎಲ್ಹೋದೆನೆನಲು ನಾನು..
ಅಂಥವ್ರೆಲ್ಲ ಕವಿಗೆ ಬಂದು ಸಹಸ್ರನಾಮ ಹಾಡ್ಬಿಟ್ರು!
ಹಣ ಮುಕ್ಕೋರೇ ಕಕ್ತೀರಿ, ನಾಡಿನ ಋಣವೆನ್ನಲು,
ನಾಯಕ್ರೆಲ್ಲ ಬರ್ದವಗ್ ಬಂದು ಕ್ಲಾಸ್ ತಗೊಂಡ್ರಲ್ಲೋ..ತಮ್ಮ..
ಕಟು ಸತ್ಯವ ಬಿಂಬ್ಸಿ ಪೇಪರ್ನಾಗ ಬಂದ್ ಕುಂತ್ರೆ, ಮಕ್ಳಿಗೆಲ್ಲಾ ಲಾಲಿಯಂತೂ ಹಾಡ್ದಂಗಿರಲ್ವಲ್ಲೋ ತಮ್ಮಾ...
ಲೇಖನಿ ಹರಿತವು, ಬರೀಯೋವ್ನು ಬಹಳವೇ ಜಾಣ!
ನಾನವ್ನ ಮಗುವೇ ಕಾಣಣ್ಣೋ.. ಅವ್ನ ಭಾವ್ನೆಯಿಂದ ಹುಟ್ಟಿದವ್ನಣ್ಣೋ ...
ಓದ್ಗಾರ ಓದ್ತಾ ಅವ್ನೆ, ಮೆಚ್ತಾನೆ, ಬೈತಿರ್ತಾನೆ!
ವಿಮರ್ಶಕ್ರು ಓದಿ ಬಂದು ಸರಿ ತಪ್ಪು ಹೇಳ್ತಿರ್ತಾರಣ್ಣಾ..
ಸಂಪಾದಕ್ರ ಮನ ಗೆಲ್ಬೇಕೂ, ಹೃದ್ಯ ದೊಳ್ಗೆ ಹೆಕ್ಕೊಳ್ಬೇಕು!
ನಾನು ನೀಟಾಗಿ ಪ್ರಿಂಟ್ ಹೊಡ್ಕೊಂಡ್ ಆಚೆ ಬರೋಕೆ..ಅಣ್ಣಾ....
ನಾ ನಿನ್ನ ಮರಿಯೇ ಆದ್ರೂ, ನಿನ್ನ ಕೈಯ ಪೆನ್ನಾಗ್ ಬಂದ್ರೂ,
ನನ್ನ ಬದ್ಕು ನಿಂಗೆ ಗೊತ್ತಿಲ್ಲೋ ನನ್ ಕವಿಯಣ್ಣಾ..
ನಾನ್ ನಿನ್ನ ಹೆಸ್ರೇಳ್ಬೇಕಂದ್ರೆ, ನೂರ್ ವರ್ಷ ಬಾಳ್ಬೇಕಂದ್ರೆ,
ನಾಕ್ ಜನಕ್ ಉಪ್ಯೋಗಾಗೋ ಹಂಗ್ ಬರ್ಯಣ್ಣೋ....
@ಪ್ರೇಮ್@
17.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ