ಬದುಕ ಗಾಲಿ
ಕಾಂತದಂಥ ನಿನ್ನ ನಗುವ
ಸೆಳೆತಕ್ಕೆ ನಾನು ಸೋತೆನು!
ಬಾಳ ತೇರ ಎಳೆಯಲೆನಗೆ
ನೀನೆ ಜತೆಯು ಎಂದೆನು!//
ನಿನ್ನ ಸೆಳೆತ ನನ್ನ ಮಿಡಿತ
ಒಟ್ಟಾಗಿ ದಿನ ಕಳೆಯಲು,
ನಾನೆ ನೀನು ನೀನೆ ನಾನು
ಬಾಳ ಬಂಡಿ ಸಾಗಲು//
ಮಾತಿನಲ್ಲೆ ಮುತ್ತು ತಂದು
ಮೋಹ ತೋರಿ ಗೆಲ್ಲುವೆ!
ಮನದ ಪರದೆ ಸರಿಸಿ ಬಂದು
ಮೌನದಲ್ಲೆ ಸೆಳೆಯುವೆ!//
ಹಗಲು ರಾತ್ರಿಯಂತೆ ಇದುಹು
ಸುಖ ದುಃಖದೀ ಜೀವನ!
ಬೈಗು ಬಂದ ಬಳಿಕ ಸಂಜೆ
ಬಂದಾಗ ಬಾಳು ಪಾವನ//
ಮನದ ನೋವು ನಲಿವನೆಲ್ಲ
ಹಂಚಿ ಬಾಳೆ ಪ್ರೀತಿಯು!
ಅರಿತು ನಡೆದು ಕ್ಷಣವ ಕಳೆಯೊ
ಬಾಳಿನ ನಿಜ ನೀತಿಯು//
@ಪ್ರೇಮ್@
16.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ