ಭಾನುವಾರ, ಆಗಸ್ಟ್ 4, 2019

1146. ಮಾಡರ್ನ್ ಬದುಕು

ಮಾಡರ್ನ್ ಬದುಕು

ಕೈಯಲಿ ಕಾಲಲಿ ಚಕ್ರವ ಕಟ್ಟುತ
ಓಡುವ ಭರಾಟೆ ಕೆಲಸವ ನೆನೆಸುತ..
ಎದ್ದೆಡೆ ಅಡಿಗೆಯ ಮನೆಯಲಿ ಕಾಯಕೇ
ನಂತರ ಕಛೇರಿ ಒಳಗಡೆ ಸಾಯಕ//

ದೋಸೆ ಇಡ್ಲಿ ಪಲಾವ್ ರೊಟ್ಟಿ
ಜೊತೆಗೊಂದು ಸಾಂಬಾರ್ ಮಾಡಲು ಕುಟ್ಟಿ!
ಮಸಾಲೆ ಪುಡಿಯು ಹದವಾದರೆ ಚೆನ್ನ!
ಇಲ್ಲದೆ ಹೋದರೆ ಸಾರದು ಅಮಾನ್ಯ!

ತಿನ್ನುತ ಹೊರಡುತ ಬಸ್ಸಿಗೆ ಗಡಿಬಿಡಿ,
ನೂಕು ನುಗ್ಗಲಿನ ಜೀವನ ಬಂಡಿ!
ಕಛೇರಿ ಸೇರಿ ಐದೇ ನಿಮಿಷದಿ
ಬಾಸ್ ನ ಆಜ್ಞೆ ಯ ಮೀಟಿಂಗ್ ನಿಗಧಿ!

ಸಂಜೆಯವರೆಗೆ ಫೈಲಿನ ಜೊತೆಗೆ!
ತಲೆ ಎತ್ತಲು ಮುಳ್ಳು ಐದರ ಬಳಿಗೆ!
ಓಟವು ಬಸ್ಸಿನ ನಿಲ್ದಾಣದೆಡೆಗೆ!
ತೂರಿಕೊಳುತಲಿ ರಶ್ಶಿನ ಬಸ್ಸಿನ ಒಳಗೆ!

ಯಾರಿಗೂ ಬೇಡ ಮಾತುಕತೆ  ಹರಟೆ
ಮೊಬೈಲ ಲೋಕದಿ ಜಾಲದಿ ಚಾಟೇ.
ಮನೆ ಹತ್ತಿರ ಬರಲು ಇಳಿಯೋ ಗಡಿಬಿಡಿ!
ಮಳೆ ಬಂದರೆ ಪೂರ್ತಿ ಒದ್ದೆಯೇ ಬಿಡಿ!

ಮನದಲು ಮನೆಯಲು ಹೊರಗೂ ಗಡಿಬಿಡಿ!
ಹೀಗಿದೆ ನಮ್ಮಯ ಜೀವನ ನೋಡಿ!
ಮಾತಿಲ್ಲ ಕತೆಯಿಲ್ಲದ  ಒಂಟಿತನ ಮರೆವ!
ಮಾತಿನ ಮಹಿಮೆಯ ಅರಿತು ಬಾಳುವ!
@ಪ್ರೇಮ್@
30.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ