ಲಕುಮಿಗೆ ಶರಣು...
ಧನಲಕ್ಷ್ಮಿ ಧಾನ್ಯಲಕ್ಷ್ಮಿ
ನೀಡೆನಗೆ ವರವ ತಾಯೇ..
ಗಜಲಕ್ಷ್ಮಿ ಧೈರ್ಯಲಕ್ಷ್ಮಿ
ತೋರೆನಗೆ ನಿನ್ನ ಮಾಯೇ...
ಸಂತಾನ ಲಕ್ಷ್ಮಿ ವಿಜಯ ಲಕ್ಷ್ಮಿ
ಬದುಕ ಗೀತೆ ಹಾಡಿಸಮ್ಮಾ..
ಅಷ್ಟಲಕ್ಷ್ಮಿ ಜಯಲಕ್ಷ್ಮಿ
ಜಯಮಾಲೆಯ ಕರುಣಿಸಮ್ಮಾ..
ವನಲಕ್ಷ್ಮಿ ರಾಜಲಕ್ಷ್ಮಿ
ನಿತ್ಯ ಸುಖದಿ ಪಾಲಿಸೆಮ್ಮನು..
ಆದಿಲಕ್ಷ್ಮಿ ಐಶ್ವರ್ಯಲಕ್ಷ್ಮಿ
ಐಶ್ವರ್ಯ ನೀಡಿ ಸಲಹೆಮ್ಮನು...
ವರಲಕ್ಷ್ಮಿ ಧೈರ್ಯಲಕ್ಷ್ಮಿ
ಮನಕೆ ಶಾಂತಿ ನೀಡಮ್ಮಾ..
ಅಭಯಲಕ್ಷ್ಮಿ ಮಹಾಲಕ್ಷ್ಮಿ
ಸರ್ವ ಜನರ ಪೊರೆಯಮ್ಮಾ.
@ಪ್ರೇಮ್@
24.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ