ಭಾನುವಾರ, ಆಗಸ್ಟ್ 4, 2019

1149. ಕಾಯೋ ಹರಿಯೇ

ಕಾಯೋ ಹರಿಯೇ

ದಾಸಾನುದಾಸ ನಾನು ಶ್ರೀನಿವಾಸ ನಿನ್ನ ದಯೆಗೆ,
ಕಾಸನ್ನು ಕೇಳಲಾರೆ ,ಬಂದಿಹೆನು ಸಾಧಿಸೆ ಧರೆಗೆ!

ಮುಕುತಿಗಾಗಿ ಬೇಡಲಾರೆ, ಶಕುತಿ ನೀಡೋ ತಂದೆ,
ಪೊರೆವವನೂ ನೀನೆ ಎಂದು ನಿನ್ನ ನಂಬಿ ಬಂದೆ!

ಮೌನದಲ್ಲು ಬೇಡುತಿರುವೆ, ಅಭಯ ನೀಡೆಂದು,
ಮನಕೆ ಶಾಂತಿ ಆರೋಗ್ಯ ಕೊಟ್ಟು ಕಾಪಾಡೆಂದು..

ಕೋಟಿ ಹೊನ್ನು,ಬಂಗ್ಲೆ ಕಾರು ಕೇಳಲಾರೆ ಹರಿಯೇ,
ನೆಮ್ಮದಿಯ ಬದುಕನು ನೀಡು, ಅದುವೆ ನನಗೆ ಸಿರಿಯೇ..

ಮನದಿ ನಿತ್ಯ ಭಜಿಸುತಿರುವೆ, ಕಾಪಾಡು ರಂಗಾ,
ಕಂಬವೊಡೆದು ಬಂದು ನಿಂತ ಬಕುತರ ಸಲಹುವ ನರಸಿಂಗಾ..

ಆಶಾಪಾಶಗಳಿಗೆ ನಾನು ದಾಸನಾಗದಂತೆ ಮಾಡು,
ಮೋಸವಾಗದೆ ಬದುಕು ಕಟ್ಟೋ ವರವ ನೀನು ನೀಡೋ...
@ಪ್ರೇಮ್@
27.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ