ತಾಯೇ...
ಅಮ್ಮ ನಿನ್ನ ನಿತ್ಯದ ಸೇವೆಗೆ
ನನ್ನೆದೆಯೇ ಆಲಯವು ಭಕ್ತಿಗೆ/
ನಿನ್ನ ಕರುಣೆ ಸ್ಫೂರ್ತಿ ನನ್ನ ಬದುಕಿಗೆ
ತಾಯೆ ದುರ್ಗೆ ನಮಿಪೆ ನಿನಗೆ ಅಡಿಗಡಿಗೆ//
ನನ್ನ ಭಕ್ತಿ ರಸದ ನೈವೇದ್ಯವು ನಿನಗೆ
ಮಾತೆ ವರವ ಬೇಡಿ ಬಂದೆ ಬಳಿಗೆ/
ಶಾಂತಿ ರೂಪಿ ಕಾಂತಿಯುಕ್ತ ವದನವು
ನೋಡಿದಾಗ ಮುಖವ ಕಳೆವುದಾಯಾಸವು//
ಮನೆಯು ಮಾರು ಎಲ್ಲ ಕಡೆ ಬಕುತಿಯು
ನಿನ್ನ ಒಲವೆ ನನಗೆ ಎಂದು ಶಕುತಿಯು/
ಮಾತೆ ನಿನಗೆ ಮಾಡುವೆ ಆರತಿಯ
ಖಾತೆ ತೆರೆದು ನೀಡು ನನಗೆ ಸದ್ಗತಿಯ//
ನನ್ನ ಮನದ ಗುಡಿಯೆ ನಿನ್ನ ದೇವಾಲಯ
ನನ್ನ ಮೆದುಳ ಭಾವನೆಗಳೆ ನಿನಗೆ ದೇಗುಲ/
ಸರ್ವಗೆ ಉಪಯುಕ್ತ ಕಾರ್ಯವೇ ಪೂಜೆಯು,
ಸಕಲ ಜನಕೆ ಒಳಿತ ಹರಕೆ ಧ್ಯಾನವು//
@ಪ್ರೇಮ್@
22.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ