ಭಾನುವಾರ, ಆಗಸ್ಟ್ 4, 2019

1141. ಯೋಧ

ಯೋಧ
ನೆತ್ತರ ಹರಿಸುತ ಸಾವಿಗೆ ಅಂಜದೆ
ಮಾತೆಯ ರಕ್ಷಣೆ ಮಾಡುತ ನಿಲ್ಲದೆ!
ವೈರಿಯ ಎದೆಯಲಿ ತಲ್ಲಣ ಮೂಡಿಸೋ
ಯೋಧನೆ ನಿನ್ನಯ ಕಾರ್ಯವ ಮೆಚ್ಚಿದೆ!

ಊಟ ತಿಂಡಿಯ ಮರೆತು ನಿಂದರೂ
ಕೈಕಾಲುಗಳಲಿ ಶಕ್ತಿ ಕುಂದಿದರೂ
ಕೊನೆಯ ಕ್ಷಣದ ವರೆಗೆ ದೇಶ ಭಕ್ತಿಯೂ
ವೀರ ಮರಣದಲೂ ರಾಷ್ಟ್ರ ಪ್ರೀತಿಯೂ...

ಕರ್ತವ್ಯ ಬಿಡದೆ ದೇಶದ ಗಡಿಯಲಿ
ದ್ರೋಹಿಯ ಮೆಟ್ಟಿ ನಿಲ್ಲಲು ಸಂತಸ,
ಚಳಿಯ ಹಿಮಾಲಯ ತಪ್ಪಲಲಿ,
ಎಲ್ಲ ಸೀಮೆಯ ಕಾಯಲು ನೀ ಪ್ರತ್ಯಕ್ಷ!

ನಮ್ಮ ಬದುಕಿಗೆ ನೀನೇ ಸ್ಫೂರ್ತಿ
ಈ ಪುಟ್ಟ ಕವನಕೆ ನಿನಾದೆ ಶಕ್ತಿ!
ಪ್ರತಿ ಕಾರ್ಯವ ಮಾಡಲು ಬೇಕಿದೆ ಶಾಂತಿ,
ಹಬ್ಬುವುದೆಲ್ಲೆಡೆ ನಿನ್ನಯ ಕೀರ್ತಿ!
@ಪ್ರೇಮ್@
19.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ