ಭಾನುವಾರ, ಆಗಸ್ಟ್ 4, 2019

1156. ಬದುಕ ಕವಿತೆ

ಬದುಕ ಕವಿತೆ

ಬರಹ ಬರಲಿ ಮನದ ಕದದಿ
ಸರಳ ಪದವ ಬಳಸಿ ಕರದಿ!
ವದನಕಿರಲಿ ನಗೆಯ ಮೊಗವು
ಬದುಕ ಹಣತೆ ಹಸಿರ ತರಲಿ//

ವಚನ ರಚನ ನಯನ ಸರಸ
ಸರಿದು ಮೆರೆಯೆ ವಿವರ ಮಿಡಿತ
ಬರೆದ ಬವಣೆ ಭವದ ತವಕ..

ಸರಸ ವಿರಸ ನಿಜದ ಬದುಕು!
ಕಸವ ಎಸೆಯೊ ಕುಹಕ ತಳುಕು!
ಮುದದ ಕಪಟ ಹರಸದಿರಲಿ,
ನಯದ ನಮನ ಹೊರಗೆ ಬರಲಿ..

ಕವಿಯ ಸವಿಯ  ನುಡಿಯು ಸುರಿದು
ಗಡಿಗೆ ತುದಿಯ ತಡಿಕೆ ಮುರಿದು
ಬರೆವ ತುಮುಲ ನಡೆದು ಬರುತ
ನೆರೆದ ಜಗದಿ ಭರದಿ ಬದುಕಿ....

ತನುವ ಸಖದಿ ಕಳೆದು ಕಲೆತು
ಮೆದುಳ ವಿಷಯ ಪಸರಿ ಬೆರೆತು
ಕೆಲಸ ಬಯಸಿ ಸಮಯ ಉಳಿಸಿ
ಪರರ ಭವದ ಭವನೆ ಅರಿತು...
@ಪ್ರೇಮ್@
19.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ