ಕವನ
ಗಣಪಗೆ ವಂದನೆ
ಆನೆಯ ಮುಖದ ಗಣಪಗೆ ವಂದಿಪೆ,
ಕಾಯುತ ಹರಸೋ ಎನ್ನುತ ಬೇಡುವೆ//
ನಂಬಿದ ಜನರನು ಬಿಡದೆಯೆ ಹರಸುವೆ,
ಕಾಯುವ ದೇವನು ನೀನೇ ಎನುವೆ//
ಪಾರ್ವತಿ ಸುತನೆ ಮೊದಲು ವಂದಿಪನೆ,
ದಾರಿಯ ತೋರೋ ಹರನ ಪುತ್ರನೇ.
ಕಾವನು ನೀನೇ ವರವನು ಕೊಡುತ
ಜಾಣನ ಮಾಡು ಬುದ್ಧಿಯ ನೀಡುತ!//
ಏಕದಂತನೆಂಬ ಹೆಸರು ಹೊತ್ತವನೆ
ಗೌರಿ ಪುತ್ರ ಗಜಾನನ ಗಜವದನನೇ
ಮೂಷಿಕ ವಾಹನ ಮೋದಕ ಹಸ್ತನೇ
ಸರ್ವ ವಂದಿತನೇ..ಚಾಮರ ಕರ್ಣನೇ//
ಬಾರೋ ಗಣಪ ಮುಖವನು ತೋರೋ,
ಮಾಡುವ ಕಾರ್ಯದ ವಿಘ್ನವ ಕಳೆಯೋ,
ಮನೆ ಮನವೆಲ್ಲವ ಬೆಳಗುತ ನಡೆಯೋ,
ನಮ್ಮಯ ಹೃದಯದಿ ಭಕ್ತಿಯ ಬೆಳೆಯೋ...//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ