ಬುಧವಾರ, ಏಪ್ರಿಲ್ 8, 2020

1375. ನನ್ನ ಹೆಮ್ಮೆ

ನನ್ನ ಹೆಮ್ಮೆ

ಹಚ್ಚ ಹಸುರಿನ ಸ್ವಚ್ಛ ಹಳ್ಳಿಯು
ನನ್ನದೆ ಆಗಿಹುದು
ಹಾಲನು ಹೊತ್ತ ಎತ್ತಿನ ಗಾಡಿಯು
ಪಟ್ಟಣಕೋಡಿಹುದು .

ಭತ್ತದ ಗದ್ದೆಯು ನಮಗಾಗೆಂದೂ
ಊಟವ ನೀಡಿತ್ತು!
ಮನೆಯಲಿ ದನಕರು ಹೋರಿಯೂ ಕೂಡಾ
ಸಂತಸದಲಿ ನಲಿದಿತ್ತು..

ಗದ್ದೆಯ ಉಳುಮೆಗೆ ನಾನೂ ಹೋಗುವೆ
ಅಪ್ಪನ ಹೆಗಲಲ್ಲಿ
ಹಾರುತಲಿರುವ ಚಿಟ್ಟೆಯ ಹಿಡಿವೆ
ಅಕ್ಕನ ಜೊತೆಯಲ್ಲಿ..

ಎತ್ತಿನ ಬಂಡಿಯು ಪೇಟೆಗೆ ಹೋಗಲು
ಮಾವನ ಕೈಹಿಡಿದು..
ಕೈಯಲಿ ತುಂಬಾ ಕಡಲೇಕಾಯಿ
ತಿನ್ನುತ ನಾ ನಡೆದು..


ಪ್ರತಿದಿನ ಕೆರೆಯಲಿ ಸ್ನಾನವ ಮಾಡಿ
ಉಲ್ಲಾಸ ಮನಕೆಲ್ಲಾ..
ನಮ್ಮಯ ಹಳ್ಳಿಯ ಅಂದವ ಕಂಡು
ಹೆಮ್ಮೆ ನಮಗೆಲ್ಲಾ..
@ಪ್ರೇಮ್@
08.01.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ