ಮಂಗಳವಾರ, ಏಪ್ರಿಲ್ 7, 2020

1372. ಭಾವಗೀತೆ-ಭಾವದಲೆಯಲಿ

ಭಾವದಲೆಯಲಿ..

ಬದುಕು ಇದ್ದರೆ ಅದು ನಿನ್ನೊಡನಿರಲಿ
ನಿನ್ನ ಹೊರತಾದ ಬದುಕಿಗೆ ಧಿಕ್ಕಾರವಿರಲಿ

ಪ್ರೀತಿ ಇರುವುದಾದರೆ ಅದು ನಿನ್ನೊಡನಿರಲಿ
ಇತರರ ಪ್ರೀತಿಗೆ ಮನ ಬಯಸದಿರಲಿ
ನೊಂದ ಮನಗಳೆರಡು ಜೊತೆ ಸೇರಿ ನಲಿಯಲಿ
ಬಾಳ ರಥವು ವೇಗವಾಗಿ ಮುನ್ನಡೆಯಲಿ

ನಡೆವ ಪ್ರತಿ ಹೆಜ್ಜೆಯೊಂದಿಗೆ ನಿನ್ನ ಹೆಜ್ಜೆ ಸೇರಲಿ
ಹೃದಯದ ಪ್ರತಿ ಬಡಿತವೂ ನಿನಗಾಗಿ ಮೀಸಲಾಗಿರಲಿ
 ತಪ್ಪ ತಿದ್ದುತಲಿ ಮನವೆಂದು ಕಲಿಯುತಲಿ
ನನಗೆ ನೀನು ನಿನಗೆ ನಾನು ಜೊತೆಯಾಗಿ ಸಾಗುತಲಿ

 ನನ್ನೆದೆ ಎದೆ  ಬಾಂದಳದಲಿ ರವಿ ನೀ ಉದಯಿಸುತಲಿ
ರಾತ್ರಿಯಾಗಲು ಬಿಡದೆ ಹಗಲಿರುಳು ಬೆಳಗುತಲಿ.
 ಮಾತು ಮುತ್ತಾಗಿರಲಿ ಪ್ರೀತಿ ತುತ್ತಾಗಿರಲಿ
ಭವದ ಪ್ರತಿ ಕ್ಷಣದಲೂ ನಗೆ ಹೂ ಬಾಡದಿರಲಿ
 
ನಿನ್ನಧರಕೆ ನನ್ನುಸಿರ ಬಿಸಿ ಸೇರಿ ತಣಿಯಲಿ
ನನ್ನುಸಿರದು ನಿನಗಾಗಿಯೇ ಕಾದು ಹೊರಬರಲಿ..
ಸರಸ ಸಲ್ಲಾಪದಲಿ ದಿನ ವರ್ಷ ಕ್ಷಣವಾಗಲಿ
ಮಧುರ ಭಾವದಿ ಮನ ಕುಣಿದು ಹಾಡಲಿ
@ಪ್ರೇಮ್@
07.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ