ಕಲಿಯಬೇಕಿದೆ...
ನಾನು ಕಲಿತಿರುವೆ
ಅಹಂಕಾರ ಎಂಬ ಪದವ..
ತಲೆತಗ್ಗಿಸದ ಗುಣವ..
ನನ್ನದೇ ಸರಿಯೆಂಬ ವಾದವ..
ಇತರರು ನನ್ನಷ್ಟು ತಿಳಿಯರೆಂಬ ಮದವ..
ನಾನು ಕಲಿಯುತ್ತಲೇ ಇರುವೆ..
ಹಿರಿಯರನು ದೂಷಿಸುವುದನು
ಹಲವರಲಿ ತಪ್ಪು ಹುಡುಕುವುದನು
ಪ್ರೀತಿಸಿ ಮೋಸ ಮಾಡುವುದನು
ಪರರಿಗೆ ಬೆರಳು ತೋರಿಸುವುದನು..
ನಾನು ಕಲಿಯುತ ಸಾಗುತಿರುವೆ
ಇತರರ ತಪ್ಪುಗಳ ಎತ್ತಿ ಹಿಡಿಯುವುದ
ಮನೆ ಮನಗಳ ಮುರಿಯುವುದ
ಗೆಳೆಯರ ನಡುವೆ ಬತ್ತಿ ಇಡುವುದ
ದ್ವೇಷದ ಬೀಜ ಬಿತ್ತುವುದ..
ನಾ ಕಲಿಯುತ ಬದುಕುತಿರುವೆ
ಜತೆಯಲಿರುವವರ ನಿಂದಿಸುವುದನು
ಬಳಿಯಲಿರುವವರ ತೆಗಳುವುದನು
ಸಾಕು ಪ್ರಾಣಿಗಳ ಹಿಂಸಿಸುವುದನು
ಕಸವ ಹೊರಗೆ ಬಿಸಾಕುವುದನು
ಪ್ಲಾಸ್ಟಿಕನ್ನು ಉಪಯೋಗಿಸುವುದನು..
ಮತ್ತೆ ನಾನು ಕಲಿಯಬೇಕಿದೆ
ಹೃದಯಗಳ ಜೋಡಿಸುವುದನು..
@ಪ್ರೇಮ್@
03.12.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ